ಎವಿಜಿ ಶಾಲೆಯಲ್ಲಿ ಶಾರದಾಪೂಜೆ, ಆಯುಧಪೂಜೆ, ಭಜನೋತ್ಸವ

0

ಪುತ್ತೂರು: ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಎವಿಜಿ ಅಸೋಸಿಯೇಟ್ಸ್‌ನ ಜಂಟಿ ಆಶ್ರಯದಲ್ಲಿ ಅ.17ರಂದು ಶಾಲಾ ಆವರಣದಲ್ಲಿ ಶಾರದಾಪೂಜೆ, ಆಯುಧಪೂಜೆ, ಅಕ್ಷರಾಭ್ಯಾಸ ಹಾಗೂ ಭಜನೋತ್ಸವ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ಶಾರದಾಪೂಜೆಯ ಮಹತ್ವ, ಆಯುಧಪೂಜೆಯ ಐತಿಹ್ಯ ಹಾಗೂ ನವದುರ್ಗೆಯರ ಆರಾಧನೆಯ ವಿಶೇಷತೆಯನ್ನು ವಿವರಿಸಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಲ್ಕಿ ತಪೋವನದ ಎಂ.ಆರ್. ಪೂಂಜ ಐಟಿಐನ ನಿವೃತ್ತ ಪ್ರಾಂಶುಪಾಲ ಎ.ಎನ್. ಸಾಲ್ಯಾನ್ ಅವರು ಮಾತನಾಡಿ, ದೇವತಾರಾಧನೆ ಮನುಷ್ಯನ ಬದುಕಿಗೆ ಭದ್ರತೆಯನ್ನು ನೀಡುತ್ತದೆ. ನವರಾತ್ರಿಯಲ್ಲಿ ದೇವಿಯರನ್ನು ಆರಾಧಿಸುವುದರಿಂದ ಶಕ್ತಿ, ಸಂಪತ್ತು ಹಾಗೂ ಜ್ಞಾನ ಪ್ರಾಪ್ತಿಯಾಗುತ್ತದೆ. ಭಾರತೀಯ ಸಂಸ್ಕೃತಿಯು ದೇವತಾರಾಧನೆಯ ತಳಹದಿಯ ಮೇಲೆ ನಿಂತಿದ್ದು, ಈ ಸಂಸ್ಕಾರವನ್ನು ಮಕ್ಕಳಿಗೆ ಎಳವೆಯಲ್ಲಿಯೇ ಕಲಿಸಿಕೊಡುವುದು ಅತ್ಯಂತ ಅವಶ್ಯಕ ಎಂದು ಹೇಳಿದರು. ವೇದಿಕೆಯಲ್ಲಿ ಶಾಲೆಯ ಸಂಚಾಲಕ ಎ.ವಿ. ನಾರಾಯಣ, ಉಪಾಧ್ಯಕ್ಷ ಉಮೇಶ್ ಮಳುವೇಲು, ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ನಿರ್ದೇಶಕ ಸೀತಾರಾಮ ಪೂಜಾರಿ ಹಾಗೂ ಮುಖ್ಯೋಪಾಧ್ಯಾಯ ಅಮರನಾಥ ಪಟ್ಟೆ ಉಪಸ್ಥಿತರಿದ್ದರು.


ಬೆಳಗ್ಗೆ ಭಜನಾ ಕಾರ್ಯಕ್ರಮದೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಶಾರದಾಪೂಜೆ, ಮಕ್ಕಳ ಅಕ್ಷರಾಭ್ಯಾಸ, ಶಂಖ ಊದುವ ಸ್ಪರ್ಧೆ ಹಾಗೂ ತರಗತಿ ಕೊಠಡಿಗಳು ಮತ್ತು ವಾಹನಗಳಿಗೆ ಆಯುಧಪೂಜೆ ನೆರವೇರಿಸಲಾಯಿತು. ಶಾಲೆಯ ಕಾರ್ಮಿಕರಾದ ದಿನೇಶ್ ಗೌಡ, ಚಂದ್ರಹಾಸ ಕುಲಾಲ್, ಸುಂದರ ಪೂಜಾರಿ ಹಾಗೂ ಯಶೋಧರ ಗೌಡ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಎ.ವಿ. ನಾರಾಯಣ ಅವರು ಅಭಿನಂದನಾ ಭಾಷಣ ಮಾಡಿದರು. ಶಾಲಾ ನಿರ್ದೇಶಕರಾದ ಪುಷ್ಪಾವತಿ ಕಳುವಾಜೆ, ಪ್ರತಿಭಾದೇವಿ, ಗಂಗಾಧರ ಗೌಡ, ಸೀತಾರಾಮ ಕೇವಳ, ವಾಮನ ಗೌಡ, ದೀಕ್ಷಾ ವಾಮನ ಗೌಡ, ಕೌಶಿಕ್, ವನಿತಾ ಎ.ವಿ. ಹಾಗೂ ಕೊರಗಪ್ಪ ಗೌಡ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅನಿಕ, ಜ್ಞಾನ ಹಾಗೂ ಸೋನಿಕ ಪ್ರಾರ್ಥಿಸಿದರು. ಶಿಕ್ಷಕಿ ರಾಧಾ ಸ್ವಾಗತಿಸಿದರು. ಅಕ್ಷತಾ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ರೀಮಾ ಲೋಬೋ, ಸುಚಿತ, ಶ್ವೇತಾ ಹಾಗೂ ಗಾಯತ್ರಿ ಅವರು ಗೌರವಿಸಲ್ಪಟ್ಟ ಕಾರ್ಮಿಕರ ಕಿರು ಪರಿಚಯ ಮಾಡಿದರು. ಪ್ರತಿಭಾದೇವಿ ವಂದಿಸಿದರು. ಶ್ರೀಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here