ಮೈಸೂರು ದಸರಾದಲ್ಲಿ ಕಂಬಳ ಸಡಗರ – ಶಾಸಕ ಅಶೋಕ್ ಕುಮಾರ್ ರೈಗೆ ಸನ್ಮಾನ

0

ಪುತ್ತೂರು: ಮೈಸೂರು ನಗರದಲ್ಲಿ ಪ್ರಪ್ರಥಮ ಬಾರಿಗೆ ದಸರಾ ಉತ್ಸವದ ವೇಳೆ ಅತ್ಯಂತ ಅದ್ದೂರಿಯಾಗಿ ಕಂಬಳ ಪ್ರದರ್ಶನ ಮತ್ತು ಸ್ಪರ್ಧೆ ಆಯೋಜಿಸಿ ಸಹಸ್ರಾರು ಜನರ ಆಕರ್ಷಣೆಗೆ ಕಾರಣರಾದ ಪುತ್ತೂರಿನ ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಮೈಸೂರಿನ ದ.ಕ. ಕನ್ನಡಿಗರ ಸಂಘ ಮತ್ತು ತುಳು ಕೂಟದ ಪರವಾಗಿ ಸನ್ಮಾನಿಸಲಾಯಿತು.DRDO ಸಂಸ್ಥೆಯ ಮಾಜಿ ಪ್ರಧಾನ ಸಾರ್ವಜನಿಕ ಸಂಪರ್ಕ ಅಧಿಕಾರಿ ಮೈಸೂರಿನ ಶ್ರೀ ಜಯಪ್ರಕಾಶ್ ರಾವ್ ಅವರು ಶಾಲು ಹೊದಿಸಿ, ತಮ್ಮ ಪುಸ್ತಕ ‘ಅಗ್ನಿಯ ರೆಕ್ಕೆಗಳು’ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.

LEAVE A REPLY

Please enter your comment!
Please enter your name here