







ಪುತ್ತೂರು: ಪುತ್ತೂರು ಎಪಿಎಂಸಿ ರಸ್ತೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಸಂಸ್ಥೆ ಸಾಯ ಎಂಟರ್ಪ್ರೈಸಸ್ ನಲ್ಲಿ ಅ. 20 ರಂದು ಮಹಾನವಮಿಯಂದು ಆಯುಧ ಪೂಜೆಯನ್ನು ಮಾಡಲಾಯಿತು.


ಪುರೋಹಿತ ಶ್ರೀ ಉದನೇಶ್ವರ ಭಟ್ಟರು ಶ್ರೀದೇವಿ ಪೂಜಾ ಕಾರ್ಯವನ್ನು ನೆರವೇರಿಸಿದರು. ಸಾಯ ಸಂಸ್ಥೆಯ ಸಿಬ್ಬಂದಿಗಳೆಲ್ಲ ಸೇರಿ ಪೂಕಳಂ ರಚಿಸಿ ನಂತರ ಶ್ರೀದೇವಿ ಭಜನೆಗಳನ್ನು ಹಾಡಿ ಭಜನಾ ಕಾರ್ಯಕ್ರಮ ನಡೆಸಿದರು. ಸಂಸ್ಥೆಯ ನಿರ್ದೇಶಕರು, ಸಿಬ್ಬಂದಿಗಳು ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದರು.













