







ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅ.19ರಂದು ಸಂಪನ್ನಗೊಂಡಿತು.
ಕ್ಷೇತ್ರದಲ್ಲಿ ಪ್ರಥಮ ದಿನ ಗಣಪತಿ ದೇವರಿಗೆ ಗಣಹೋಮ ಅಮ್ಮನವರಿಗೆ ನವಕ ಕಲಸ ಅಭಿಷೇಕ ನಾಗದೇವರಿಗೆ ಪೂಜೆಯ ನಂತರ ಸಂಜೆ ರಾಜರಾಜೇಶ್ವರಿ ಅಮ್ಮನವರಿಗೆ ನವರಾತ್ರಿ ಪೂಜೆ ನಡೆಯಿತು. ರಾಜರಾಜೇಶ್ವರಿ ಅಮ್ಮನವರು ನವರಾತ್ರಿ 9 ದಿನಗಳಲ್ಲಿ ಬೇರೆ ಬೇರೆ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡಿದರು.



ದಿನಂಪ್ರತಿ ಅನ್ನದಾನ ಸೇವೆ ನಡೆಯಿತು. ಕ್ಷೇತ್ರದ ಪೂರ್ವ ಶಿಷ್ಟಾಚಾರ ಪದ್ಧತಿಯಂತೆ ಪ್ರಥಮ ದಿನ ಕ್ಷೇತ್ರದಿಂದಲೇ ರಂಗ ಪೂಜೆ ನಡೆಯಿತು. ನಂತರ ಭಕ್ತಾದಿಗಳ ಸೇವಾ ರೂಪದಲ್ಲಿ ರಂಗಪೂಜೆ ನಡೆಯಿತು. 9 ದಿನವೂ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ದಿನಂಪ್ರತಿ ಅಮ್ಮನವರಿಗೆ ತೊಡಿಸಿದ ಸೀರೆಯನ್ನು ನವರಾತ್ರಿ ಪೂಜೆ ಮಾಡಿದ ಭಕ್ತರ ಹೆಸರನ್ನು ಚೀಟಿಯಲ್ಲಿ ಹಾಕಿ ಅದರಲ್ಲಿ ಒಂದು ಚೀಟಿಯನ್ನು ತೆಗೆದು ಆ ಚೀಟಿಯಲ್ಲಿ ಬಂದ ಹೆಸರಿನವರಿಗೆ ಅಮ್ಮನವರ ಸೀರೆಯನ್ನು ಅಮ್ಮನವರ ಪ್ರಸಾದ ರೂಪದಲ್ಲಿ 9 ದಿನವೂ ವಿತರಿಸಲಾಯಿತು. ಅ.18ರಂದು ಕ್ಷೇತ್ರದ ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಅ.19ರಂದು ರಂಗ ಪೂಜೆ ಮತ್ತು ನವರಾತ್ರಿಯ ಮಹಾ ಪೂಜೆ ನಡೆದು ನವರಾತ್ರಿ ಮಹೋತ್ಸವ ಸಂಪನ್ನಗೊಂಡಿತು. ಹಲವಾರು ಗಣ್ಯರು, ಭಕ್ತಾದಿಗಳು ಆಗಮಿಸಿ ದರ್ಶನ ಪಡೆದರು. ಭಕ್ತಾದಿಗಳು ಹರಕೆ ರೂಪದಲ್ಲಿ ಸೀರೆಯನ್ನು ಒಪ್ಪಿಸಿದರು.













