ವಕೀಲ ಕಿರಣ್ ಆಲಾಜೆರವರ ನೂತನ ಕಛೇರಿ ಆಲಾಜೆ ಲಾ ಛೇಂಬರ‍್ಸ್ ಶುಭಾರಂಭ

0

ಪುತ್ತೂರು: ವಕೀಲರಾದ ಕಿರಣ್ ಆಲಾಜೆರವರ ನೂತನ ಕಛೇರಿ “ಆಲಾಜೆ ಲಾ ಛೇಂಬರ‍್ಸ್ ” ಪುತ್ತೂರು ನಗರ ಪೊಲೀಸ್ ಠಾಣಾ ಸಮೀಪದ ಹೆಗ್ಡೆ ಆರ್ಕೆಡ್‌ನಲ್ಲಿ ಅ.21ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶುಭಾರಂಭಗೊಂಡಿತು.

ವಕೀಲರಾದ ಕಿರಣ್ ಆಲಾಜೆ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎಮ್., ಜತೆ ಕಾರ್ಯದರ್ಶಿ ಉದಯಚಂದ್ರ ಕೆ., ಹಾಗೂ ವಕೀಲರು, ಹಿತೈಷಿಗಳು ಆಗಮಿಸಿ ಶುಭಹಾರೈಸಿದರು. ಕಿರಣ್ ಆಲಾಜೆಯವರ ತಾಯಿ ಪುಷ್ಪಾ, ಪತ್ನಿ ಚೈತ್ರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here