ಮುಂಡಾಳಗುತ್ತು ದಿವಾಕರ ರೈ ನಿಧನ

0

ಪುತ್ತೂರು : ಕೆದಂಬಾಡಿ ಗ್ರಾಮದ ಮುಂಡಾಳಗುತ್ತು ನಿವಾಸಿ ದಿವಾಕರ ರೈ(60 ವ.) ಅವರು ಅ. 21 ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.


ಮಹಾರಾಷ್ಟ್ರದ ಪುಣೆಯಲ್ಲಿ ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದ ಕೆಲ ಸಮಯದಿಂದ ಸ್ವಗೃಹದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಅವಿವಾಹಿತರಾಗಿದ್ದ ಮೃತರು ಸಹೋದರರಾದ ಪ್ರಗತಿಪರ ಕೃಷಿಕ ಸುಧಾಕರ ರೈ ಮುಂಡಾಳ, ಕುಂಬ್ರದ ನೆಮ್ಮದಿ ಜನ ಸೇವಾ ಕೇಂದ್ರದ ಮಾಲೀಕರಾದ ಪ್ರಭಾಕರ ರೈ , ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ , ಸಹೋದರಿಯರಾದ ವಸಂತಿ ಶೀನಪ್ಪ ಶೆಟ್ಟಿ , ಜಯಂತಿ ಸುಜೀರ್ ಶೆಟ್ಟಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here