







ಕುಂಬ್ರ: ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್ನ ಪ್ರಥಮ ಮಹಡಿಯಲ್ಲಿ ನವೀನ್ & ಅಸೋಸಿಯೇಟ್ಸ್ ಕಚೇರಿ ಅ.21ರಂದು ಶುಭಾರಂಭಗೊಂಡಿತು.



ಕಾವು ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕ ಶಿವಪ್ರಸಾದ್ ಕಡಮಣ್ಣಾಯ ಅವರ ಪೌರೋಹಿತ್ಯದಲ್ಲಿ ಗಣಹೋಮದೊಂದಿಗೆ ಉದ್ಘಾಟನೆ ನಡೆಯಿತು.



ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರ ಮಾತೃಶ್ರೀ ಮೀನಾಕ್ಷಿ ಬಿ ಎಸ್, ಅತ್ತೆ ಮಾವಂದಿರಾದ ಪದ್ಮಾವತಿ, ಅಣ್ಣು ಪಾಟಾಳಿ, ಪತ್ನಿ ಉಷಾ ಕುಮಾರಿ, ಮಗಳು ನೈನಿಕ, ಮಗ ನೈನೀಶ್ ಮತ್ತು ಬಂಧುಮಿತ್ರರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ನವೀನ್ ಕುಮಾರ್ ಬಿ.ಎಸ್. ಅವರು ಎಲ್ಲರನ್ನೂ ಸ್ವಾಗತಿಸಿ, ತಮ್ಮ ಸಂಸ್ಥೆಯಲ್ಲಿ ಆದಾಯ ತೆರಿಗೆ ರಿಟರ್ನ್ಸ್, ಜಿಎಸ್ಟಿ ರಿಟರ್ನ್ಸ್, ಯೋಜನಾ ವರದಿಗಳು, ಲೆಕ್ಕಪತ್ರ ಸೇವೆಗಳು ಹಾಗೂ ಇತರ ತೆರಿಗೆ ಸಂಬಂಧಿತ ಸೇವೆಗಳು ಲಭ್ಯವಿರುವುದಾಗಿ ತಿಳಿಸಿದರು. ಸ್ಟಾರ್ಟ್ಅಪ್ಗಳಿಗೆ ಸಂಸ್ಥೆಯ ಸೇವಾ ಶುಲ್ಕದಲ್ಲಿ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಅವರು ತಿಳಿಸಿದರು. ಕಾರ್ಯಕ್ರಮಕ್ಕೆ ವಿವಿಧ ಗಣ್ಯರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಆಗಮಿಸಿ ಶುಭ ಹಾರೈಸಿದರು.










