ಅ.25: ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ.ಅವರಿಗೆ ಶಿಷ್ಯವೃಂದದಿಂದ ಚಂದ್ರಾಭಿನಂದನಾ, ನಿವೃತ್ತ ಉಪನ್ಯಾಸಕರಿಗೆ ಗುರುವಂದನೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನಲ್ಲಿ ಸುದೀರ್ಘ 36 ವರ್ಷ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ಅ.31ರಂದು ನಿವೃತ್ತಿ ಹೊಂದಲಿರುವ ಚಂದ್ರಶೇಖರ ಕೆ.ಅವರಿಗೆ ಶಿಷ್ಯವೃಂದದಿಂದ ಚಂದ್ರಾಭಿನಂದನಾ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ನಿವೃತ್ತ ಉಪನ್ಯಾಸಕರಿಗೆ ಗುರುವಂದನೆ ಕಾರ್ಯಕ್ರಮ ಅ.25ರಂದು ಬೆಳಗ್ಗೆ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಬೆಳಗ್ಗೆ 9.15ಕ್ಕೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಬಳಿಕ ಶಿಷ್ಯರಿಂದ ಅನಿಸಿಕೆ, ವಿದುಷಿ ಪ್ರಮೀಳಾ ಲೋಕೇಶ್ ಶಿಷ್ಯವೃಂದದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 11.15ರಿಂದ ಅಭಿನಂದನಾ ಸಭೆ ನಡೆಯಲಿದ್ದು ಚಂದ್ರಶೇಖರ ಕೆ.ಅವರಿಗೆ ಚಂದ್ರಾಭಿನಂದನಾ ಹಾಗೂ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನಲ್ಲಿ ಸುದೀರ್ಘ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಾಧವ ಆಚಾರ್ಯ ಇಜ್ಜಾವು, ಸದಾಶಿವ ಭಟ್, ಎಂ.ಸತೀಶ್ ಭಟ್, ಗಣರಾಜ ಕುಂಬ್ಳೆ, ಹರಿನಾರಾಯಣ ಆಚಾರ್ಯ, ವಸಂತಕುಮಾರ್ ಡಿ. ಅವರಿಗೆ ಗುರುವಂದನೆ ನಡೆಯಲಿದೆ. ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್ ಅಭಿನಂದನಾ ಭಾಷಣ ಮಾಡಲಿದ್ದಾರೆ.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕುಕ್ಕೆ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ರಂಗಯ್ಯ ಶೆಟ್ಟಿಗಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕೋಶಾಧಿಕಾರಿ ಕೆ.ಸೇಸಪ್ಪ ರೈ, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ವೆಂಕಟೇಶ್ ದಾಮ್ಲೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ ಕೊಯಿಲ ಉಪಸ್ಥಿತಿ ಇರಲಿದ್ದಾರೆ. ಮಧ್ಯಾಹ್ನ 1.30ರಿಂದ ಸುಬ್ರಹ್ಮಣ್ಯ ಕಾರಂತ್ ಸಾರಥ್ಯದ ಇಂಚರ ಮ್ಯೂಸಿಕಲ್ ತಂಡ ರಾಮಕುಂಜ ಇವರಿಂದ ರಸಮಂಜರಿ, ಸಹಮಿಲನ-ಸಹಭೋಜನ ನಡೆಯಲಿದೆ ಎಂದು ಚಂದ್ರಾಭಿನAದನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here