







ಹುಲಿ ವೇಷದ ಸೊಬಗನ್ನು ನೋಡುವ ಅವಕಾಶ- ಕಾವು ಹೇಮನಾಥ ಶೆಟ್ಟಿ


ಪುತ್ತೂರು: ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ, ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಯೋಗದಲ್ಲಿ ಅ.21ರಂದು ಪುತ್ತೂರು ಬಂಟರ ಭವನದ ಅಂಗಳದಲ್ಲಿ ಕೀರ್ತಿ ಶೇಷ ಪಿಲಿ ರಾಧಣ್ಣರವರ ಶಾರದಾ ಹುಲಿ ತಂಡದಿಂದ ಎರಡನೇ ವರ್ಷದ ಪಿಲಿ ಪಜ್ಜೆ(ಹುಲಿ ವೇಷ ಕುಣಿತ), ಆಯುಧ ಪೂಜೆ, `ಭಜನೆ” ಕಾರ್ಯಕ್ರಮ ಜರಗಿತು.




ಹುಲಿ ವೇಷದ ಸೊಬಗನ್ನು ನೋಡುವ ಅವಕಾಶ- ಕಾವು ಹೇಮನಾಥ ಶೆಟ್ಟಿ:
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ದೀಪ ಬೆಳಗಿಸಿ, ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಈ ವರ್ಷ ಎರಡನೇ ಬಾರಿಗೆ ನಾವು ಸಂಘದ ಮೂಲಕ ಪಿಲಿ ರಾಧಣ್ಣ ತಂಡದಿಂದ ಹುಲಿ ವೇಷದ ಸೊಬಗನ್ನು ನೋಡುವ ಅವಕಾಶ ಕಲ್ಪಿಸಿದ್ದೇವೆ. ಮುಂದೆಯೂ ಇಂತಹ ಕಾರ್ಯಕ್ರಮ ಆಯೋಜನೆಯನ್ನು ಮಾಡುತ್ತೇವೆ ಎಂದು ಹೇಳಿದರು.

ಐಸಿರಿ ತಂಡದಿಂದ ಭಜನೆ
ತಾಲೂಕು ಮಹಿಳಾ ಬಂಟರ ವಿಭಾಗದ ಐಸಿರಿ ಭಜನಾ ತಂಡದಿಂದ ಭಜನೆ ನಡೆಯಿತು. ತಂಡವನ್ನು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಗೌರವಿಸಿದರು
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ನಿಕಟಪೂರ್ವ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ, ಪುತ್ತೂರು ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ, ನಿರ್ದೇಶಕರುಗಳಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಶಿವನಾಥ ರೈ ಮೇಗಿನಗುತ್ತು, ರವಿಪ್ರಸಾದ್ ಶೆಟ್ಟಿ ಬನ್ನೂರು, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರುಗಳಾದ ಜಯಪ್ರಕಾಶ್ ರೈ ನೂಜಿಬೈಲು, ವತ್ಸಲಾ ಪಿ.ಶೆಟ್ಟಿ, ಬಂಟರ ಸಂಘದ ಮಾಜಿ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಬಂಟರ ಸಂಘದ ಜೊತೆ ಕಾರ್ಯದರ್ಶಿಗಳಾದ ಹರಿಣಾಕ್ಷಿ ಜೆ.ಶೆಟ್ಟಿ, ಸ್ವರ್ಣಲತಾ ಜೆ.ರೈ, ಉದ್ಯಮಿಗಳಾದ ಎಂ.ಆರ್.ಜಯಕುಮಾರ್ ರೈ ಮಿತ್ರಂಪಾಡಿ, ಸೂರ್ಯನಾಥ ಆಳ್ವ ಮಿತ್ತಳಿಕೆ, ಪ್ರಕಾಶ್ ರೈ ಮನವಳಿಕೆ, ತಾಲೂಕು ವಿದ್ಯಾರ್ಥಿ ಬಂಟರ ವಿಭಾಗದ ಅಧ್ಯಕ್ಷ ಸಮೃದ್ದ್ ಶೆಟ್ಟಿ ಮತ್ತು ಪದಾಧಿಕಾರಿಗಳು, ತಾಲೂಕು ಯುವ ಬಂಟರ ವಿಭಾಗದ ಉಪಾಧ್ಯಕ್ಷ ಸುಜೀರ್ ಕುಮಾರ್ ಶೆಟ್ಟಿ ನುಳಿಯಾಲು, ಪ್ರಧಾನ ಕಾರ್ಯದರ್ಶಿ ಸಂದೇಶ್ ರೈ, ತಾಲೂಕು ಮಹಿಳಾ ಬಂಟರ ವಿಭಾಗದ ಕೋಶಾಧಿಕಾರಿ ಅರುಣಾ ಡಿ.ರೈ ಮತ್ತು ಪದಾಧಿಕಾರಿಗಳು, ಐಸಿರಿ ಭಜನಾ ತಂಡದ ನಯನಾ ರೈ ನೆಲ್ಲಿಕಟ್ಟೆ ಮತ್ತು ತಂಡದವರು ಉಪಸ್ಥಿತರಿದ್ದರು.

ರವಿಚಂದ್ರ ರೈ ಕುಂಬ್ರ ಹಾಗೂ ಭಾಸ್ಕರ್ ರೈ ಕಾರ್ಯಕ್ರಮದಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ವಾಹನಗಳಿಗೆ ಆಯುಧ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ಕಡ್ಲೆ-ಬಜಿಲ್, ಕ್ಷೀರ, ಚಾ ಮತ್ತು ಕಾಫಿಯ ವ್ಯವಸ್ಥೆಯನ್ನು ಮಾಡಲಾಗಿತ್ತು.
ಅಭಿಷೇಕ್ ಶೆಟ್ಟಿಯವರಿಗೆ ಗೌರವಾರ್ಪಣೆ
ಸುಮಾರು ಒಂದು ತಾಸು ಪಿಲಿ ಪಜ್ಜೆ ಕಾರ್ಯಕ್ರಮವು ಕೀರ್ತಿ ಶೇಷ ಪಿಲಿ ರಾಧಣ್ಣರವರ ಪುತ್ರ ಅಭಿಷೇಕ್ ಶೆಟ್ಟಿ ನೇತೃತ್ವದಲ್ಲಿ ಶಾರದಾ ಹುಲಿ ತಂಡದಿಂದ ಜರಗಿತು. ಅಭಿಶೇಕ್ ಶೆಟ್ಟಿಯವರನ್ನು ತಾಲೂಕು ಬಂಟರ ಸಂಘದ ವತಿಯಿಂದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಗೌರವಿಸಿದರು
ಶಾಸಕ ಅಶೋಕ್ ಕುಮಾರ್ ರೈ ಭೇಟಿ
ಶಾಸಕ ಅಶೋಕ್ ಕುಮಾರ್ ರೈ ರವರು ಪಿಲಿಪಜ್ಜೆ ಕಾರ್ಯಕ್ರಮಕ್ಕೆ ಆಗಮಿಸಿ, 30 ನಿಮಿಷ ಕಾರ್ಯಕ್ರಮ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕರನ್ನು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಗೌರವಿಸಿದರು
ಮಿತ್ರಂಪಾಡಿ ಜಯರಾಮ ರೈರವರಿಗೆ ಸ್ವಾಗತ
ಬಂಟರ ಸಂಘದ ವತಿಯಿಂದ ಆಯುಧ ಪೂಜೆ ನಡೆಯುತ್ತಿದ್ದ ವೇಳೆ, ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅವರು ಆಗಮಿಸಿದರು. ಇವರನ್ನು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಸ್ವಾಗತಿಸಿದರು.










