







ನವದೆಹಲಿ, ಅ.22: ಶರಾವತಿ ಪಂಪ್ಡ್ ಸ್ಟೋರೇಜ್ ಮತ್ತು ಮೇಕೆದಾಟು ಯೋಜನೆಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಅನುಮೋದನೆ ನೀಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಪರಿಸರ, ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರಿಗೆ ಮನವಿ ಮಾಡಿದ್ದಾರೆ.ದೆಹಲಿಯ ಪರಿಸರ ಭವನದಲ್ಲಿ ಗುರುವಾರ ಭೇಟಿ ಮಾಡಿ ಚರ್ಚಿಸಿದರು.


ಶರಾವತಿ ಪಂಪ್ಡ್ ಸ್ಟೋರೇಜ್:



ಫೆ.28, 2026ರ SC-NBWL 89ನೇ ಸಭೆಯಲ್ಲಿ ಚರ್ಚೆಯಾಗಿತ್ತು.ತಾಂತ್ರಿಕ ಸಮಿತಿ ಕೇಳಿದ ಸ್ಪಷ್ಟೀಕರಣ ಮತ್ತು NIAS ತಾಂತ್ರಿಕ ವರದಿಯನ್ನು ರಾಜ್ಯ ಸರ್ಕಾರ ಸಲ್ಲಿಸಿದೆ ಎಂದು ಸಿಎಂ ವಿವರಿಸಿದ್ದಾರೆ.
ಮೇಕೆದಾಟು ಕುಡಿಯುವ ನೀರಿನ ಯೋಜನೆ:
ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ 20 ಬೋರ್ಹೋಲ್ ಕೊರೆಯಲು (0.0000352 ಹೆಕ್ಟೇರ್) ಅನುಮತಿ ಕೋರಿ ಜು.1, 2026ರಂದು ಪ್ರಸ್ತಾಪ ಸಲ್ಲಿಸಲಾಗಿತ್ತು.
ಇದು ಕೇವಲ ಸಮೀಕ್ಷೆಗೆ ಮಾತ್ರ, ಭೂಮಿ ಬಳಕೆಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಕೇಳಿದ ದಾಖಲೆಗಳನ್ನು ಶೀಘ್ರ ನೀಡಲಾಗುವುದು.
ಕಸ್ತೂರಿ ರಂಗನ್ ವರದಿ:
- ಜು.27, 2026ರ 7ನೇ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಬೇಡಿ ಎಂದು ಮನವಿ.ಈ ಬಗ್ಗೆ ಸೆ.25, 2026ರಂದು ಪ್ರಧಾನಿ ಮೋದಿ ಅವರಿಗೂ ಪತ್ರ ಬರೆಯಲಾಗಿದೆ.
- ರಾಜ್ಯದ ಉನ್ನತ ಮಟ್ಟದ ಸಮಿತಿ ವರದಿ ಸಲ್ಲಿಸಿ, ಒಂದು ವರ್ಷದಲ್ಲಿ ಭೌತಿಕ ಸಮೀಕ್ಷೆ ಮುಗಿಯುವವರೆಗೆ ಕರಡು ಅಂತಿಮಗೊಳಿಸಬಾರದು ಎಂದು ಕೋರಿದ್ದಾರೆ.
ಬೆಳಗಾವಿ ಸಕ್ಕರೆ ಕಾರ್ಖಾನೆ:
ಎಕೊ ಕೇನ್ ಶುಗರ್ ಅಂಡ್ ಎನರ್ಜಿ ಲಿ. ಕಾರ್ಖಾನೆ 2016ಕ್ಕಿಂತ ಮೊದಲು ಆರಂಭವಾಗಿದೆ, ಆದ್ದರಿಂದ ESZ ವ್ಯಾಪ್ತಿಗೆ ಬರುವುದಿಲ್ಲ. 500 ಕಾರ್ಮಿಕರು, 5000 ಕುಟುಂಬಗಳು ಅವಲಂಬಿತವಾಗಿದ್ದು, ESZದಿಂದ ಕೈಬಿಡಬೇಕು ಎಂದು ಮನವಿ ಮಾಡಿದರು.










