







ಪುತ್ತೂರು: ಸುರಿದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡ ಘಟನೆ ಅ.23ರಂದು ಸಂಜೆ ನಡೆದಿದೆ.



ಬೆದ್ರೋಡಿಯಿಂದ ಕಾಂಚನ ಕ್ರಾಸ್ ವರೆಗೆ ಅಲ್ಲಲ್ಲಿ ಹೆದ್ದಾರಿಗೆ ನೀರು ನುಗ್ಗಿದ್ದು, ರಸ್ತೆ ಮುಳುಗಡೆಯಾಗಿತ್ತು. ಇದರಿಂದ ಕೆಲ ಘಂಟೆಗಳ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.




ಹೆದ್ದಾರಿ ಬದಿಯ ಚರಂಡಿ ತುಂಬಿ ಹರಿದ ಪರಿಣಾಮ ನೀರು ರಸ್ತೆಯ ಮೇಲೆ ಹರಿದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.











