







ಪುತ್ತೂರು: ಪರ್ಪುಂಜ ಬಿ.ಜೆ.ಎಮ್ ಕಾಂಪ್ಲೆಕ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ‘ಶ್ರೀ ದುರ್ಗಾ ಶಾಮಿಯಾನ ಮತ್ತು ಲೈಟಿಂಗ್ಸ್’ ಸಂಸ್ಥೆಯು ೩ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ, ಅ.23 ರಂದು ಸಂಸ್ಥೆಯ ಆವರಣದಲ್ಲಿ ಶ್ರೀ ಗಣಪತಿ ಹೋಮ ಹಾಗೂ ಶ್ರೀ ಲಕ್ಷ್ಮೀ ಪೂಜೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅತ್ಯಂತ ಶ್ರದ್ಧಾಭಕ್ತಿಗಳಿಂದ ನೆರವೇರಿತು.ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಅರ್ಚಕರಾದ ರವಿರಾಮ ಭಟ್ ಜಮದಗ್ನಿ ಅವರು ವಹಿಸಿ, ಹೋಮ-ಹವನ ಹಾಗೂ ಪೂಜಾ ಕೈಂಕರ್ಯಗಳನ್ನು ಸಾಂಗವಾಗಿ ನೆರವೇರಿಸಿ ಆಶೀರ್ವದಿಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಅರುಣ್ ಕುಮಾರ್ ಗೋವಿಂದಮೂಲೆ ಅವರು ಮಾತನಾಡಿ, “ಕಳೆದ ಎರಡು ವರ್ಷಗಳಿಂದ ನಮ್ಮ ಸಂಸ್ಥೆಯ ಬೆಳವಣಿಗೆಗೆ ನಿರಂತರವಾಗಿ ಸಹಕರಿಸಿದ ಎಲ್ಲಾ ಗೌರವಾನ್ವಿತ ಗ್ರಾಹಕರಿಗೆ, ಹಿತೈಷಿಗಳಿಗೆ ಹಾಗೂ ನಿರಂತರ ಶ್ರಮಿಸುತ್ತಿರುವ ಸಿಬ್ಬಂದಿ ವರ್ಗಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಮುಂದೆಯೂ ಇದೇ ರೀತಿಯ ಸಹಕಾರ ಮತ್ತು ಪ್ರೀತಿ ನಮ್ಮ ಮೇಲಿರಲಿ’ ಎಂದು ಕೋರಿದರು. ನಮ್ಮಲ್ಲಿ ಚೆಯರ್, ಟೇಬಲ್, ಲೈಟಿಂಗ್ಸ್ ಡೆಕೊರೇಶನ್, ಜನ್ಶಿಟ್ ಹಾಗೂ ಅಡುಗೆ ಪಾತ್ರೆಗಳು ಬಾಡಿಗೆಗೆ ಲಭ್ಯವಿದೆ ಎಂದು ಹೇಳಿ ಹೆಚ್ಚಿನ ವಿವರಗಳಿಗೆ ಮೊ.9449365981 ಗೆ ಸಂಪರ್ಕಿಸುವಂತೆ ತಿಳಿಸಿ ಸಹಕಾರ ಕೋರಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳು, ಬಂಧು-ಮಿತ್ರರು ಹಾಗೂ ಸ್ಥಳೀಯ ಹಿತೈಷಿಗಳು ಉಪಸ್ಥಿತರಿದ್ದು, ಸಂಸ್ಥೆಯ ಮುಂದಿನ ಯಶಸ್ಸಿಗೆ ಶುಭ ಹಾರೈಸಿದರು.













