ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರ ಪ್ರಮಾಣ ಪತ್ರ ಶಿಬಿರ

0

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರ ಪ್ರಮಾಣ ಪತ್ರ ಶಿಬಿರ ನಡೆಯಿತು.

ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್ ಡಿ.ಕೆ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದಲ್ಲಿ ಆಸ್ಪತ್ರೆಯ ಎಲುಬು-ಕೀಲು ತಜ್ಞ ಡಾ. ಅಜಯ್ ಎಂ.ಬಿ, ಮಕ್ಕಳ ತಜ್ಞ ಡಾ. ಕೃಷ್ಣಾನಂದ ಕೆ, ಕಿವಿ-ಮೂಗು-ಗಂಟಲು ತಜ್ಞೆ ಡಾ. ಪುಷ್ಪಲತಾ ಎನ್, ನೇತ್ರ ತಜ್ಞೆ ಡಾ. ಅನಿತಾ ಕಿರಣ್ ಮತ್ತು ಫಿಸಿಷಿಯನ್ ಡಾ. ಯದುರಾಜ್ ಡಿ.ಕೆ ಅವರು ಅರ್ಹ ವಿಕಲಚೇತನರನ್ನು ತಪಾಸಣೆ ನಡೆಸಿ ಪ್ರಮಾಣ ಪತ್ರ ನೀಡಿದರು.

ಈ ಸಂದರ್ಭದಲ್ಲಿ ಪುತ್ತೂರು ತಾಲ್ಲೂಕು ಪಂಚಾಯತ್ ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಹಾಗೂ ಪುತ್ತೂರು ಮತ್ತು ಕಡಬ ತಾಲೂಕಿನ ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರು ಸಹಕರಿಸಿದರು.

LEAVE A REPLY

Please enter your comment!
Please enter your name here