ಸಂಪ್ಯ ಕಟ್ಟಡ ಕಾರ್ಮಿಕ ಅಜೇಯ್ ರಾಜ್ ನಿಧನ

0

ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಉದಯಗಿರಿ ದಿ.ರಾಮದಾಸ್ ಅವರ ಪುತ್ರ, ಕಟ್ಟಡಗಳ ಟೈಲ್ ಅಳವಡಿಸುವ ಕೆಲಸ ಮಾಡುತ್ತಿದ್ದ ಅಜೆಯ್ ರಾಜ್(40ವ) ಅಸೌಖ್ಯದಿಂದ ನಿಧನರಾದರು.


ಹಗ್ಗ ಜಗ್ಗಾಟ ಕ್ರೀಡೆಯಲ್ಲಿ ಸಕ್ರೀಯರಾಗಿದ್ದ ಅಜೇಯ್ ರಾಜ್ ಸಂಪ್ಯ ಶ್ರೀ ವಿಷ್ಣು ಬಳಗ ತಂಡದಲ್ಲಿ ಪುತ್ತೂರು ಮಾತ್ರವಲ್ಲದೆ ಇತರ ಕಡೆಗಳಲ್ಲಿ ನಡೆದ ಹಗ್ಗ ಜಗ್ಗಾಟದಲ್ಲಿ ವಿಷ್ಣು ಬಳಗ ತಂಡ ಹಲವು ಬಾರಿ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅವಿವಾಹಿತರಾಗಿರುವ ಅಜೇಯ್ ರಾಜ್ ತಾಯಿ ಜಯಲಕ್ಷ್ಮೀ, ಸಹೋದರರಾದ ಅನಿಲ್ ರಾಜ್, ಅಮೃತ್ ರಾಜ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here