ವಿಟ್ಲ: ಖಾಸಗಿ ಬಸ್‌ನಿಂದ ಬಿದ್ದು ಪ್ರಯಾಣಿಕನಿಗೆ ಗಾಯ

0

ವಿಟ್ಲ: ವಿಟ್ಲ-ಸಾಲೆತ್ತೂರು-ಮುಡಿಪು-ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್‌ನಿಂದ ಅಪರಿಚಿತ ಪ್ರಯಾಣಿಕರೊಬ್ಬರು ಆಯತಪ್ಪಿ ಕೆಳಕ್ಕೆ ಬಿದ್ದು ಪ್ರಜ್ಞಾಹೀನರಾಗಿರುವ ಘಟನೆ ನಡೆದಿದೆ.

ಕುಡ್ತಮುಗೇರು-ಸಾಲೆತ್ತೂರು ನಡುವಿನ ಕಾಡುಮಠ ಶಾಲೆ ಬಳಿ ಬಸ್ ಚಲಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ತಕ್ಷಣ ಸ್ಥಳೀಯರು ಮತ್ತು ಬಸ್ ಸಿಬ್ಬಂದಿ ಗಾಯಾಳುವನ್ನು ಅಂಬ್ಯುಲೆನ್ಸ್ ಮೂಲಕ ವಿಟ್ಲ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಾಳುವಿನ ಗುರುತು ಪತ್ತೆಯಾಗಿಲ್ಲ. ಘಟನೆ ಬಗ್ಗೆ ವಿಟ್ಲ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here