







ಯಾರಿಗೆ ಭಕ್ತಿ ಇದೆಯೋ ಅವರಿಗೆ ಶಕ್ತಿ ಬರುತ್ತದೆ- ಎನ್.ಐತ್ತಪ್ಪ ಸಫಲ್ಯ ಸತ್ಯ, ಧರ್ಮದ ವ್ಯಾಪಾರದಿಂದ ಗ್ರಾಹಕರು ನಮ್ಮೊಂದಿಗಿರುತ್ತಾರೆ- ಪಂಜಿಗುಡ್ಡೆ ಈಶ್ವರ ಭಟ್
ಶ್ರದ್ಧೆ, ಪರಿಶ್ರಮ ಬೆಳೆಸಿಕೊಂಡಾಗ ಭಗವಂತನ ಆಶೀರ್ವಾದ- ಅರುಣ್ ಕುಮಾರ್ ಪುತ್ತಿಲ
ಗ್ರಾಹಕರ ನಂಬಿಕೆ, ಶಕ್ತಿ, ಪ್ರೀತಿ, ವಿಶ್ವಾಸ ಗಳಿಸಿದ್ದಾರೆ- ಉಜ್ವಲ್ ಪ್ರಭು
ಗ್ರಾಹಕರ ನಂಬಿಕೆ ವಿಶ್ವಾಸ ಗಳಿಸುವುದು ಮುಖ್ಯ- ಸುಭಾಷ್ ಬೆಳ್ಳಿಪ್ಪಾಡಿ


ಪುತ್ತೂರು: ಕಳೆದ 24 ವರ್ಷಗಳಿಂದ ನೆಲ್ಲಿಕಟ್ಟೆ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಮುನ್ನ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿರುವ ಕೌಸ್ತುಭ ಜ್ಯುವೆಲರ್ಸ್ ಸಂಸ್ಥೆ 25ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿದ್ದು ನವೀಕರಣಗೊಂಡು ಅ.24ರಂದು ಶುಭಾರಂಭಗೊಂಡಿತು.



ಯಾರಿಗೆ ಭಕ್ತಿ ಇದೆಯೋ ಅವರಿಗೆ ಶಕ್ತಿ ಬರುತ್ತದೆ:
ಲಕ್ಷ್ಮೀದೇವಿ ಬೆಟ್ಟದ ಶ್ರೀಮಹಾಲಕ್ಷ್ಮೀ ಮಂದಿರದ ಧರ್ಮದರ್ಶಿ ಎನ್.ಐತ್ತಪ್ಪ ಸಫಲ್ಯರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಯಾರಿಗೆ ಭಕ್ತಿ ಇದೆಯೋ ಅವರಿಗೆ ಶಕ್ತಿ ಬರುತ್ತದೆ. ನಿಮ್ಮ ಮೇಲೆ ಗ್ರಾಹಕರು ಇಟ್ಟ ಪ್ರೀತಿ ಸಹಕಾರದಿಂದ ಸಂಸ್ಥೆ ಬೆಳೆಯಲು ಸಾಧ್ಯವಾಗಿದೆ ಎಂದ ಅವರು ದೇವರ ಅನುಗ್ರಹದಿಂದ ಸಂಸ್ಥೆ ಒಳ್ಳೆಯ ರೀತಿಯಲ್ಲಿ ಬೆಳಗಲಿ ಎಂದು ಶುಭಹಾರೈಸಿದರು.
ಸತ್ಯ, ಧರ್ಮದ ವ್ಯಾಪಾರದಿಂದ ಗ್ರಾಹಕರು ನಮ್ಮೊಂದಿಗಿರುತ್ತಾರೆ:
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ ಸತ್ಯ, ಧರ್ಮದಲ್ಲಿ ವ್ಯಾಪಾರ ಮಾಡಿದರೆ ಗ್ರಾಹಕರು ನಮ್ಮ ಬಾಗಿಲಿಗೆ ಬರುತ್ತಾರೆ ಎಂಬುದಕ್ಕೆ ನಾಗೇಶ್ ಆಚಾರ್ಯರೇ ಸಾಕ್ಷಿ. 25 ವರ್ಷದಿಂದ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬೇಕಾದರೆ ಅವರ ತಾಳ್ಮೆ, ಸಹನೆ, ಪ್ರಾಮಾಣಿಕತೆಯಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದು ಹೇಳಿ ಅವರ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.
ಶ್ರದ್ಧೆ, ಪರಿಶ್ರಮ ಬೆಳೆಸಿಕೊಂಡಾಗ ಭಗವಂತನ ಆಶೀರ್ವಾದ:
ಪುತ್ತಿಲ ಪರಿವಾರದ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಕಳೆದ 24 ವರ್ಷಗಳಿಂದ ಜನಮಾನಸದ ಪ್ರೀತಿ ಗಳಿಸಿದ್ದಾರೆ. ಒಬ್ಬ ವ್ಯಕ್ತಿ ತನ್ನ ಕಾರ್ಯದಲ್ಲಿ ಶ್ರದ್ಧೆ, ಪರಿಶ್ರಮವನ್ನು ಬೆಳೆಸಿಕೊಂಡಾಗ ಭಗವಂತನ ಆಶೀರ್ವಾದ ಸಿಗುತ್ತದೆ. ಅಲ್ಲದೆ ಜೀವನದಲ್ಲಿ ಎತ್ತರಕ್ಕೆ ಏರುತ್ತಾರೆ ಎಂಬುದಕ್ಕೆ ನಾಗೇಶ್ ಆಚಾರ್ಯರವರು ತೋರಿಸಿಕೊಟ್ಟಿದ್ದಾರೆ. ವ್ಯವಹಾರದಲ್ಲಿ ಪ್ರಾಮಾಣಿಕತೆ ಇದ್ದಾಗ ಜನರು ಗುರುತಿಸುತ್ತಾರೆ ಎಂದ ಅವರು ಇಂತಹ ನೂರಾರು ಸಂಸ್ಥೆಗಳನ್ನು ಹೊಂದುವ ಯೋಗ ಭಾಗ್ಯ ಸಿಗಲಿ ಎಂದು ಶುಭಹಾರೈಸಿದರು.
ಗ್ರಾಹಕರ ನಂಬಿಕೆ, ಪ್ರೀತಿ, ವಿಶ್ವಾಸ ಗಳಿಸಿದ್ದಾರೆ:
ಯು.ಆರ್.ಪ್ರಾಪರ್ಟೀಸ್ ಮಾಲಕ ಉಜ್ವಲ್ ಪ್ರಭು ಮಾತನಾಡಿ ನಾಗೇಶ್ರವರು ನನಗೆ 15 ವರ್ಷದಿಂದ ಪರಿಚಯಸ್ಥರು. ಉದ್ಯಮ ಆರಂಭಿಸಲು ದೇವರ ಸಹಾಯ ಬೇಕು. 24 ವರ್ಷದ ಹಿಂದೆ ಸಂಸ್ಥೆ ಹುಟ್ಟು ಹಾಕಿ ಗ್ರಾಹಕರ ನಂಬಿಕೆ, ಶಕ್ತಿ, ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಸ್ವರ್ಣೋದ್ಯಮದ ಕಲೆ ಹೊಂದಿರುವ ನಿಮ್ಮ ಸಂಸ್ಥೆ ಕರ್ನಾಟಕದಾದ್ಯಂತ ಹೆಸರುವಾಸಿ ಪಡೆಯಲಿ ಎಂದು ಶುಭಹಾರೈಸಿದರು.
ಗ್ರಾಹಕರ ನಂಬಿಕೆ ವಿಶ್ವಾಸ ಗಳಿಸುವುದು ಮುಖ್ಯ:
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ಬೆಳ್ಳಿಪ್ಪಾಡಿ ಮಾತನಾಡಿ ವಾಲ್ತಾಜೆ ಕುಂಬದವರು ಚಿನ್ನದ ವ್ಯಾಪಾರ ಮಾಡುವವರು. ಚಿನ್ನದ ಉದ್ಯಮದಲ್ಲಿ ಎಷ್ಟು ಕಷ್ಟ ಇದೆ ಎಂಬುದು ನನಗೆ ಗೊತ್ತಿದೆ. ಲಾಭದೊಂದಿಗೆ ನಷ್ಟ ಅನುಭವಿಸಬೇಕಾಗುತ್ತದೆ. ಗ್ರಾಹಕರ ನಂಬಿಕೆ ವಿಶ್ವಾಸ ಗಳಿಸುವುದು ಮುಖ್ಯ ಎಂದ ಅವರು ಈ ಸಂಸ್ಥೆ ಉತ್ತಮವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.
ಸತೀಶ್ ಆಚಾರ್ಯ ಕಾರ್ಕಳ ಮಾತನಾಡಿ ಶುಭಹಾರೈಸಿದರು. ನೆಲ್ಲಿಕಟ್ಟೆ ಪಿ.ಕೆ.ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾದ ಉಜ್ವಲ್ ಪ್ರಭುರವರು ಪ್ರಥಮ ಖರೀದಿ ಮಾಡಿದರು. ಧರ್ಮದರ್ಶಿ ಐತ್ತಪ್ಪ ಸಫಲ್ಯರವರನ್ನು ಸಂಸ್ಥೆಯ ಮಾಲಕರಾದ ನಾಗೇಶ್ ಆಚಾರ್ಯ ದಂಪತಿ ಸನ್ಮಾನಿಸಿ ಗೌರವಿಸಿದರು. ಪುರೋಹಿತರಾದ ಮೂಲ್ಕಿ ಸಚಿನ್ರವರು ಧಾರ್ಮಿಕ ಪೂಜೆ ನೆರವೇರಿಸಿದರು. ದಿನೇಶ್ ಶರ್ಮ ಕೊಯ್ಯೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕರಾದ ನಾಗೇಶ್ ಆಚಾರ್ಯ ವಾಲ್ತಾಜೆ ಮತ್ತು ಸ್ನೇಹ ದಂಪತಿ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಹಲವಾರು ಗಣ್ಯರು ಆಗಮಿಸಿ ಶುಭಹಾರೈಸಿದರು.










