ಬಪ್ಪಳಿಗೆ ಶ್ರೀ ಶಾರದಾಂಬಾ ಸೇವಾ ಸಮಾಜ ಸುಧಾರಣಾ ಸಂಘದ ಶಾರದಾ ಪೂಜೆ ಹಾಗೂ ಮಹಾಸಭೆ

0

ಪುತ್ತೂರು: ಶ್ರೀ ಶಾರದಾಂಬಾ ಸೇವಾ ಸಮಾಜ ಸುಧಾರಣಾ ಸಂಘ (ರಿ.), ಬಪ್ಪಳಿಗೆ ಇದರ 24ನೇ ವರ್ಷದ ಶಾರದಾ ಪೂಜೆ ಹಾಗೂ 39ನೇ ವರ್ಷದ ಮಹಾಸಭೆ ಅಕ್ಟೋಬರ್ 18ರಂದು ಬಪ್ಪಳಿಗೆಯ ಶ್ರೀ ಶಾರದಾ ಭವನದಲ್ಲಿ ನಡೆಯಿತು.

ಬೆಳಿಗ್ಗೆ 9 ಗಂಟೆಗೆ ಶ್ರೀ ಸುಬ್ರಹ್ಮಣ್ಯ ಭಟ್ ಅವರ ಪೌರೋಹಿತ್ಯದಲ್ಲಿ ಮಹಾಪ್ರಾರ್ಥನೆಯೊಂದಿಗೆ ಆರಂಭಗೊಂಡ ಶಾರದಾ ಪೂಜೆ ಮಧ್ಯಾಹ್ನ 12.30ಕ್ಕೆ ಮಂಗಳಾರತಿಯೊಂದಿಗೆ ಸಂಪನ್ನಗೊಂಡಿತು. ಬಳಿಕ ಪ್ರಸಾದ ವಿತರಣೆ, ಅನ್ನದಾನ ಮತ್ತು ವಜ್ರದೇಹಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಶಾರದಾಂಬಾ ಯೂತ್ ಅಸೋಸಿಯೇಶನ್ ವತಿಯಿಂದ ರಂಗೋಲಿ, ಮದರಂಗಿ, ಕರಕುಶಲ ಸ್ಪರ್ಧೆ ನಡೆಸಿ ವಿಜೇತರಿಗೆ ಟ್ರೋಫಿ, ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಯಿತು.

ಮಧ್ಯಾಹ್ನ 3 ಗಂಟೆಗೆ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಮಾಜಿ ಉಪಾಧ್ಯಕ್ಷ ಯೋಗೀಶ್ ನಾಯಕ್ ಕೈಪಂಗಳ, ಸರಸ್ವತಿ ನಾರಾಯಣೀ ಆರ್ಯ ಮರಾಠಿ ಸೇವಾ ಸಮಾಜದ ಮಾಜಿ ಅಧ್ಯಕ್ಷ ಪ್ರಭಾಕರ ನಾಯಕ್, ನಿವೃತ್ತ ಪ್ರೊಫೆಸರ್ ಡಾ. ಪ್ರಭಾಕರ ನಾಯಕ್, ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ತ್ಯಾಂಪ ನಾಯಕ್ ಕಜೆ, SSYA ಸ್ಥಾಪಕ ಪ್ರಶಾಂತ್ ಕೇಶವ ಸಾಲ್ಮರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗೌರವಾಧ್ಯಕ್ಷ ಪದ್ಮನಾಭ ನಾಯಕ್, ಉಪಾಧ್ಯಕ್ಷ ವಸಂತ ಕುಮಾರ್ ಮುಕ್ರಂಪಾಡಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಕಜೆ ವೇದಿಕೆಯಲ್ಲಿದ್ದರು. ಸಮಾಜದ ಏಳಿಗೆಗೆ ಸಂಘಟಿತ ಪ್ರಯತ್ನ, ಶಿಕ್ಷಣಕ್ಕೆ ಪ್ರೋತ್ಸಾಹ, ಯುವಜನರ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಗಣ್ಯರು ಅಭಿಪ್ರಾಯಪಟ್ಟರು. ಕಲ್ಯಾಣ ಮಂಟಪಕ್ಕೆ ಜಾಗ ಖರೀದಿ, ಸಾಮೂಹಿಕ ಉಪನಯನ, ಜನಗಣತಿ ಯೋಜನೆ ಬಗ್ಗೆ ಅಧ್ಯಕ್ಷರು ತಿಳಿಸಿದರು.

ಸಮಾಜ ರತ್ನ ಸೇರಿ ವಿವಿಧ ಪ್ರಶಸ್ತಿ ಪ್ರದಾನ:
ಸಂಘದ ಸ್ಥಾಪಕರಲ್ಲಿ ಒಬ್ಬರಾದ ವಿಠ್ಠಲ್ ಗಿರಿಯಪ್ಪ ಸೀಗೆಬಲ್ಲೆ ಮತ್ತು ಮಾಜಿ ಅಧ್ಯಕ್ಷ ಶ್ರೀಧರ ನಾಯಕ್ ಬೆದ್ರಾಳ ಅವರಿಗೆ ಪ್ರಪ್ರಥಮ ‘ಸಮಾಜ ರತ್ನ’ ಪ್ರಶಸ್ತಿ ನೀಡಲಾಯಿತು.

ಇತರೆ ಪ್ರಶಸ್ತಿ ಪುರಸ್ಕೃತರು:
ಮಾಜಿ ಸೈನಿಕ – ಪಿ.ಕೆ. ಕುಮಾರ್, ಎನ್.ಕೆ. ಕೃಷ್ಣ; ಕುಶಲಕರ್ಮಿ – ಪುರುಷೋತ್ತಮ ನಾಯಕ್, ಗೋಪಾಲ ನಾಯಕ್; ರಾಜಕೀಯ – ಸೌಮ್ಯ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿ, ಎಸ್.ಎ. ಭಾಗ್ಯ; ಸಾಹಿತ್ಯ – ನಟೇಶ್ ನಾರಾಯಣ್ ನಾಯಕ್ ಕೆಮ್ಮಾಯಿ; ಧಾರ್ಮಿಕ – ಅಶೋಕ ಸಂಗಮೇಶ್ಕರ್; ವೈದ್ಯಕೀಯ – ಡಾ. ಸ್ಪೂರ್ತಿ ಕೆ. ಕೈರಂಗಳ, ಡಾ. ತೇಜಸ್ವಿನಿ; ಸರ್ಕಾರಿ ಕ್ಷೇತ್ರ – ಕೇಶವ ನಾಯಕ್ ಮುಂಡಕೊಚ್ಚಿ, ಬಾಲಕೃಷ್ಣ ನಾಯಕ್ ತೌಡುಗೋಳಿ; ಸಾಂಸ್ಕೃತಿಕ – ಅಕ್ಷತಾ ಶೇಖರ್, ಅನ್ವಿತ್ ಎಸ್.ಎನ್.; ಕ್ರೀಡಾ – ಹರ್ಷಿತ್ ಬಿ.ಎನ್., ತೃಶಾನಿ, ಮಧುರಾ; ಮಾಧ್ಯಮ – ಪ್ರವೀಣ್ ಕೆ. ಸಾಲ್ಮರ.

3 ವರ್ಷ 1 ತಿಂಗಳ ಬಾಲಕ ಶೌರ್ಯ ಕವಿನ್ ಪಿ. 30 ಸೆಕೆಂಡು ಬೆನ್ನಿನ ಮೇಲೆ ಈಜುಕೊಳದಲ್ಲಿ ತೇಲುವ ಸಾಧನೆಗಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ‘ಐಬಿಆರ್ ಅಚೀವರ್’ ಗೌರವ ಪಡೆದಿದ್ದು, ಸಂಘದಿಂದ ವಿಶೇಷ ಸನ್ಮಾನ ನೀಡಲಾಯಿತು.

ಶಶಿಶೇಖರ ಪಾಪೆತಡ್ಕ ಪ್ರಾರ್ಥನೆ, ಪದ್ಮನಾಭ ಪಡೀಲ್ ಸ್ವಾಗತ, ರವಿಕುಮಾರ್ ಮಂಗಳೂರು ಪ್ರಾಸ್ತಾವಿಕ ಮಾತು, ಸುಧೀರ್ ಕಜೆ ವಾರ್ಷಿಕ ವರದಿ, ವಸಂತ ಕುಮಾರ್ ಮುಕ್ರಂಪಾಡಿ ಲೆಕ್ಕಪತ್ರ, ಶಾರದಾ ಕೇಶವ ಸಾಲ್ಮರ ಅಂದಾಜು ಪತ್ರ ಮಂಡಿಸಿದರು. ರವಿಕುಮಾರ್ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here