ಎಲ್ಯಣ್ಣ ಪೂಜಾರಿ ಪೆರಿಯತ್ತೋಡಿ ನಿಧನ

0

ಪುತ್ತೂರು: ಪುತ್ತೂರು ತಾಲೂಕಿನ ಪೆರಿಯತ್ತೋಡಿ ನಿವಾಸಿ ಎಲ್ಯಣ್ಣ ಪೂಜಾರಿ (76) ಅವರು ಅಕ್ಟೋಬರ್ 21ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಕಳೆದ ಐದು ದಶಕಗಳಿಂದ ಮನೆ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು, ಮಣ್ಣಿನ ಗೋಡೆ ನಿರ್ಮಾಣ ಕಾರ್ಯದಲ್ಲಿ ವಿಶೇಷ ಪರಿಣತಿ ಹೊಂದಿದ್ದರು. ತಮ್ಮ ಕಾಯಕದ ಮೂಲಕ ನೂರಾರು ಮನೆಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅಲ್ಲದೆ, ಮನೆ ನಿರ್ಮಾಣಕ್ಕೆ ಅಗತ್ಯವಾದ ಪಕ್ಕಾಸು, ಅಡ್ಡ ಸೇರಿದಂತೆ ಸಾಮಗ್ರಿಗಳನ್ನು ತೆಂಗು ಹಾಗೂ ತಾಳೆ ಮರಗಳಿಂದ ತಯಾರಿಸುವುದರಲ್ಲಿ ಪ್ರಸಿದ್ಧಿ ಪಡೆದಿದ್ದರು. ತಮ್ಮ ಕೌಶಲ ಮತ್ತು ಪರಿಶ್ರಮದ ಮೂಲಕ ಸ್ಥಳೀಯವಾಗಿ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ ಹರಿಣಿ, ಮಕ್ಕಳಾದ ಪುತ್ತೂರಿನ ವಿಶಾಲ್ ಟೈಲರ್ ಮಾಲಕ ರವಿ, ಶ್ರೀ ದುರ್ಗಾ ಹೋಮ್ ಫುಡ್ ಪ್ರಾಡಕ್ಟ್ಸ್ ಮಾಲಕ ಪ್ರವೀಣ್, ಮಗಳು ಹೇಮಾವತಿ ಶ್ರೀಧರ್, ಅಳಿಯ ಶ್ರೀಧರ್ ಅನಂತಾಡಿ, ಸೊಸೆಯಂದಿರಾದ ಪ್ರಮೀಳಾ, ಹೇಮಲತಾ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here