







ನೈರ್ಮಲೀಕರಣ ವಿಶ್ವಾಸದ ಒಂದು ಭಾಗ :ಖಾಮಿಲ್ ಸಖಾಫಿ ಉಸ್ತಾದ್


ಸುಳ್ಯ: ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, 6 ದಶಕಗಳ ಸೇವಾ ಇತಿಹಾಸ ಹೊಂದಿರುವ ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ಸ್ವಚ್ಛತಾ ಆಂದೋಲನ ಮಾಸಾಚರಣೆಗೆ ಚಾಲನೆ ನೀಡಲಾಯಿತು.




ಮಾಸಾಚರಣೆ ಅಂಗವಾಗಿ ವಿವಿಧ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆ, ವಿದ್ಯಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉಪನ್ಯಾಸ, ಮನೆ ಮನೆಗೆ ಕರಪತ್ರ ಹಂಚಿಕೆ, ಗಲೀಜು ಮಾಡುವ ಕಾರ್ನರ್ಗಳಲ್ಲಿ ಭಿತ್ತಿಪತ್ರ ಅಳವಡಿಕೆ, ಆಯ್ದ ಸ್ಥಳಗಳಲ್ಲಿ ಬಾಟಲ್ ಬೂತ್ ಸ್ಥಾಪನೆ ಮೊದಲಾದ ಕಾರ್ಯಕ್ರಮಗಳನ್ನು ತಿಂಗಳಿಡೀ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಸರಣಿ ಕಾರ್ಯಕ್ರಮದ ಅಂಗವಾಗಿ ಪ್ರಥಮ ಉಪನ್ಯಾಸ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಗಾಂಧಿನಗರ ಮದರಸ ವಠಾರದಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಕೆ.ಬಿ. ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಗಾಂಧಿನಗರ ಜುಮ್ಮಾ ಮಸ್ಜಿದ್ ಖತೀಬ್ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ವಿಶೇಷ ಉಪನ್ಯಾಸ ನೀಡಿ, ಸ್ವಚ್ಛತೆಗೆ ಇಸ್ಲಾಂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ, ಶುದ್ಧಿ ಇಲ್ಲದೆ ಮಾಡುವ ಎಲ್ಲಾ ಸತ್ಕರ್ಮಗಳು ನಿಷ್ಪ್ರಯೋಜಕ ಎಂದರು. ಗಾಂಧಿನಗರ ಮುದರ್ರಿಸ್ ಮುಬಶಿರ್ ಅಹ್ಸನಿ ಶುಭಾಶಂಸನೆ ಮಾಡಿದರು. ಎಂಜೆಎಂ ಅಧ್ಯಕ್ಷ ಹಾಜಿ ಕೆ.ಎಂ.ಎಸ್. ಮಹಮ್ಮದ್ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಹಮೀದ್ ಬೀಜಕೊಚ್ಚಿ, ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ, ಆಂದೋಲನ ಸಂಚಾಲಕ ಯಾಕೂಬ್ ಹಾಜಿ ಎಸ್.ಟಿ., ವರ್ತಕರ ಸಂಘದ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಜನತಾ, ನಿಕಟಪೂರ್ವ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ಲ ಕಟ್ಟೆಕ್ಕಾರ್ ಉಪಸ್ಥಿತರಿದ್ದರು. ಮದರಸ ಮುಖ್ಯ ಶಿಕ್ಷಕ ಸಿರಾಜುದ್ದೀನ್ ಸಖಾಫಿ ಸ್ವಾಗತಿಸಿ, ನಿರ್ದೇಶಕ ಶಾಫಿ ಕುತ್ತಮೊಟ್ಟೆ ವಂದಿಸಿದರು. ಸಂಸ್ಥೆಯ ಪದಾಧಿಕಾರಿಗಳಾದ ಹನೀಫ್ ಜನತಾ, ಹನೀಫ್ ಬುಶ್ರಾ, ನಿರ್ದೇಶಕರಾದ ಅಬ್ದುಲ್ ಗಫ್ಫಾರ್, ಮಜೀದ್ ಕೆ.ಪಿ., ಸಿರಾಜ್ ಫ್ಯಾನ್ಸಿ, ಮುಹಿಯ್ಯದ್ದೀನ್ ಫ್ಯಾನ್ಸಿ, ಮದರಸ ಉಸ್ತಾದ್ ಕುಂಜಿಲ್ ಮದನಿ, ಮ್ಯಾನೇಜರ್ ಮುನೀರ್ ಅನ್ಸಾರ್ ಮತ್ತಿತರರು ಭಾಗವಹಿಸಿದ್ದರು.











