ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಮಹಾಪೋಷಕತ್ವದಲ್ಲಿ ತಾ|ಕಸಾಪ ನೇತೃತ್ವದಲ್ಲಿ ಪುತ್ತೂರು ಸಾಹಿತ್ಯೋತ್ಸವ-2026 – ಗ್ರಾಮಸಾಹಿತ್ಯ ಸಂಭ್ರಮ ಸಮಾರೋಪ

0

ಪುತ್ತೂರು: ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಅವರ ಮಹಾಪೋಷಕತ್ವದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಽಕಾರಿಗಳ ಕಚೇರಿ ಪುತ್ತೂರು ಮತ್ತು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹಕಾರದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ‘ಪುತ್ತೂರು ಸಾಹಿತ್ಯೋತ್ಸವ-2026’ ಹಾಗೂ ಗ್ರಾಮ ಸಾಹಿತ್ಯ ಸಂಭ್ರಮದ ಸಮಾರೋಪ ಮತ್ತು ಬಾಲ ಸಾಹಿತಿಗಳ ಸಮಾವೇಶ ಅ.25ರಂದು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಅದ್ದೂರಿಯಾಗಿ ನಡೆಯಿತು.


ಪುತ್ತೂರು ಸಾಹಿತ್ಯೋತ್ಸವ ಅತ್ಯುತ್ತಮ ಕಾರ‍್ಯಕ್ರಮ -ಅಶೋಕ್ ಕುಮಾರ್ ರೈ:
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಅತಿಥಿ ಶಾಸಕ ಅಶೋಕ್ ಕುಮಾರ್ ರೈ ಅವರು,ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅವರ ಮಹಾಪೋಷಕತ್ವದಲ್ಲಿ ಕ.ಸಾ.ಪ.ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ನಾಯಕ್ ಸಾರಥ್ಯದಲ್ಲಿ ಪುತ್ತೂರು ಸಾಹಿತ್ಯೋತ್ಸವ ಅತ್ಯುತ್ತಮ ಕಾರ‍್ಯಕ್ರಮವಾಗಿ ಮೂಡಿ ಬಂದಿದೆ. ತಾಲೂಕಿನ 32 ಗ್ರಾಮಗಳಲ್ಲಿ ಸಾಹಿತ್ಯದ ಕಂಪು ಹರಿಸಿದ ಸಂಘಟಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.ಮಿತ್ರಂಪಾಡಿ ಜಯರಾಮ ರೈ ಅವರು ಬಹುದೊಡ್ಡ ದಾನಿ, ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದರೂ, ಅವರ ಮನಸು, ಹೃದಯ ಪುತ್ತೂರಿನಲ್ಲೇ ಇದೆ.ಪುತ್ತೂರಿನ ಬಗ್ಗೆ ಬಹಳ ಪ್ರೀತಿಯನ್ನು ಇಟ್ಟುಕೊಂಡಿರುವ ಅವರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ‍್ಯಕ್ಕೆ ಅಬುಧಾಬಿಯಿಂದ ಒಂದು ಕೋಟಿ ರೂಪಾಯಿ ಸಂಗ್ರಹಿಸಿ ಕೊಡುತ್ತೇನೆ ಎಂದು ಹೇಳಿದ್ದಾರೆ ಮತ್ತು ನಮ್ಮನ್ನು ಕೂಡ ಅಬುಧಾಬಿಗೆ ಬರಲು ಹೇಳಿದ್ದಾರೆ.ಇಂಥ ದಾನಿಗಳು ಇದ್ದರೆ ಪ್ರತಿ ತಾಲೂಕಿನಲ್ಲಿ ಅತ್ಯುತ್ತಮವಾದ ಸಾಹಿತ್ಯ ಕಾರ‍್ಯಕ್ರಮಗಳನ್ನು ಆಯೋಜನೆ ಮಾಡಬಹುದು.ಪುತ್ತೂರು ಅನೇಕ ಕಾರ‍್ಯಗಳಲ್ಲಿ ಮುಂಚೂಣಿಯಲ್ಲಿ ಇದೆ.ಅಭಿವೃದ್ಧಿಯ ಪರ್ವ ಪುತ್ತೂರಿನಲ್ಲಿ ಪ್ರಾರಂಭವಾಗಿದೆ, ನಿಮ್ಮ ಆಶೀರ್ವಾದ ನನಗೆ ಸದಾ ಇರಲಿ ಎಂದು ಕೇಳಿಕೊಂಡರು. ಸಾಹಿತಿಗಳಿಗೆ ಸಾಹಿತ್ಯ ರಚನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪುತ್ತೂರು ಬಾಲವನದಲ್ಲಿ ಜ್ಞಾನಮಂದಿರವನ್ನು ಸ್ಥಾಪಿಸುವ ಯೋಜನೆ ಇದೆ. ಮೌನವಾಗಿ, ಯಾವುದೇ ಗೌಜಿ ಗದ್ದಲ ಇಲ್ಲದೇ ಸಾಹಿತ್ಯ ರಚನೆಗೆ ಬಾಲವನದಲ್ಲಿ ವೇದಿಕೆ ಕಲ್ಪಿಸುತ್ತೇವೆ ಎಂದು ಹೇಳಿದ ಅಶೋಕ್ ಕುಮಾರ್ ರೈ ಅವರು, ಪುತ್ತೂರಿನವರೂ ಐಎಎಸ್-ಐಪಿಎಸ್ ಅಽಕಾರಿಗಳಾಗಬೇಕು,ಅದಕ್ಕಾಗಿ ನಾನು ನನ್ನ ಸ್ವಂತ ಹಣದಿಂದ 10 ಮಂದಿಗೆ ತರಬೇತಿಯನ್ನು ಕೊಡಿಸುತ್ತಿದ್ದೇನೆ ಎಂದು ಹೇಳಿದರು.


ಸ್ಮರಣ ಸಂಚಿಕೆ ಮುಖಪುಟ ಅನಾವರಣ:
ಪುತ್ತೂರು ಸಾಹಿತ್ಯೋತ್ಸವದ ಪ್ರಯುಕ್ತ ಹೊರತರಲಾಗುವ ಸ್ಮರಣ ಸಂಚಿಕೆ ಸ್ವಂದನಾದ ಮುಖಪುಟವನ್ನು ಶಾಸಕರು ಅನಾವರಣಗೊಳಿಸಿ, ಶುಭಹಾರೈಸಿದರು.


ಪುತ್ತೂರು ಸಾಹಿತ್ಯೋತ್ಸವ ರಾಜ್ಯಕ್ಕೇ ಮಾದರಿ -ಮಿತ್ರಂಪಾಡಿ ಜಯರಾಮ ರೈ:
ಪುತ್ತೂರು ಸಾಹಿತ್ಯೋತ್ಸವ ಮತ್ತು ಗ್ರಾಮ ಸಾಹಿತ್ಯ ಸಂಭ್ರಮದ ಮಹಾಪೋಷಕರಾದ ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅವರು ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತ ದೇಶದ ಕಲೆ, ಸಂಸ್ಕೃತಿ ವಿಶ್ವಕ್ಕೇ ಗೌರವವನ್ನು ತಂದಿದೆ.ಕನ್ನಡ ಭಾಷೆ, ಸಂಸ್ಕೃತಿಯ ಸೊಬಗನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾಯಕಕ್ಕೆ ನಾನು ಸಹಕಾರ ನೀಡಿದ್ದೇನೆ. 5 ವರ್ಷಗಳ ಹಿಂದೆ, ಗ್ರಾಮ ಮಟ್ಟದಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ಕಾರ‍್ಯಕ್ರಮ ಆಯೋಜನೆ ಮಾಡಲು ಯೋಚಿಸಿದ್ದೇವೆ,ಇದಕ್ಕೆ ನಿಮ್ಮ ಸಹಕಾರ ಬೇಕು ಎಂದು ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮತ್ತು ಡಾ|ಹರ್ಷಕುಮಾರ್ ರೈ ಅವರು ನನ್ನ ಬಳಿ ಬಂದು ಕೇಳಿಕೊಂಡಿದ್ದರು. ನಾನು ಪೂರ್ಣ ಸಹಕಾರ ನೀಡುತ್ತೇನೆ ಎಂದು ಅವರಿಗೆ ಹೇಳಿದ್ದೆ. ಆ ಬಳಿಕ 32 ಗ್ರಾಮಗಳಲ್ಲಿ ಸಾಹಿತ್ಯ ಸಂಭ್ರಮ ಕಾರ‍್ಯಕ್ರಮ ಆಯೋಜನೆ ಮಾಡಿ, ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೇದಿಕೆ ಸಿಗುವ ಜೊತೆಗೆ ಗ್ರಾಮ ಮಟ್ಟದ ಅನೇಕ ಪ್ರತಿಭೆಗಳನ್ನು ಗುರುತಿಸುವ ಕಾರ‍್ಯ ನಡೆದಿದೆ.ಇದು ನನಗೆ ತುಂಬಾ ಸಂತೋಷ ತಂದಿದೆ. ಇದೀಗ ಪುತ್ತೂರು ನಗರ ವ್ಯಾಪ್ತಿಯ ವಿದ್ಯಾರ್ಥಿಗಳ ಸಾಹಿತ್ಯ ಪ್ರತಿಭೆಗೆ ಪುತ್ತೂರು ಸಾಹಿತ್ಯೋತ್ಸವ ವೇದಿಕೆ ಆಯಿತು. ಪುತ್ತೂರು ಸಾಹಿತ್ಯೋತ್ಸವ ರಾಜ್ಯಕ್ಕೇ ಮಾದರಿ ಕಾರ‍್ಯಕ್ರಮವಾಗಿದೆ,ಇಡೀ ರಾಜ್ಯದಲ್ಲಿ ಪುತ್ತೂರಿನ ಹೆಸರು ಸಾಹಿತ್ಯದ ಮೂಲಕ ಚರಿತ್ರೆಯನ್ನು ಸೃಷ್ಟಿಮಾಡಿದೆ ಎಂದು ಹೇಳಿದರಲ್ಲದೆ, ಈ ರೀತಿಯ ಕಾರ್ಯಕ್ರಮಗಳಿಗೆ ಸರ್ಕಾರಗಳೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ನಾವು ಯಾವುದೇ ದೇಶದಲ್ಲಿ ಇರಲಿ, ಯಾವುದೇ ಉದ್ಯೋಗದಲ್ಲಿ ಇರಲಿ, ನಮ್ಮ ತಾಯಿನಾಡು ಪ್ರೀತಿಯನ್ನು ಮರೆಯಬಾರದು. ನಾನು ಇಂದು ಸಮಾಜ ಸೇವೆ ಮಾಡಲು ನನಗೆ ಪ್ರೇರಣೆಯಾದವರು ನನ್ನ ತಂದೆ-ತಾಯಿ ಮತ್ತು ನನ್ನ ಮನೆಯವರು ಎಂದು ಹೇಳಿದ ಮಿತ್ರಂಪಾಡಿ ಜಯರಾಮ ರೈ ಅವರು, ನಾವು ಸಂಪಾದಿಸಿದ ಹಣದಲ್ಲಿ ಒಂದು ಅಂಶವನ್ನು ಸಮಾಜ ಸೇವೆಗೆ ಅರ್ಪಣೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.


ಸಾಹಿತ್ಯ ಸೇವೆ ಎಂಬುದು ಅತೀ ದೊಡ್ಡ ಸೇವೆ-ಕಿಶೋರ್ ಕುಮಾರ್:
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಮಾತನಾಡಿ ಪುತ್ತೂರು ಸಾಹಿತ್ಯೋತ್ಸವ ಅಚ್ಚುಕಟ್ಟಾಗಿ ನಡೆದಿದೆ. ಕಾರ್ಯಕ್ರಮ ಸಂಘಟಿಸಿದ ಎಲ್ಲರಿಗೂ ಧನ್ಯವಾದಗಳು,ಸಾಹಿತ್ಯ ಸೇವೆ ಎಂಬುದು ಅತೀ ದೊಡ್ಡ ಸೇವೆ ಎಂದರು.


ಅದ್ದೂರಿಯಾಗಿ, ಸಂಭ್ರಮದಿಂದ ನಡೆದಿದೆ- ಡಾ|ಎಂ.ಪಿ.ಶ್ರೀನಾಥ್:
ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ|ಎಂ.ಪಿ.ಶ್ರೀನಾಥ್ ಅವರು ಮಾತನಾಡಿ ಪುತ್ತೂರು ಸಾಹಿತ್ಯೋತ್ಸವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕಿಂತಲೂ ಹೆಚ್ಚು ಅದ್ದೂರಿಯಾಗಿ, ಸಂಭ್ರಮದಿಂದ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ,ಈ ಕಾರ‍್ಯಕ್ರಮಕ್ಕೆ ಮಹಾಪೋಷಕರಾಗಿ ಸಹಕರಿಸಿದ ಅಬುಧಾಬಿಯ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಪುತ್ತೂರು ಕ.ಸಾ.ಪ. ಅಧ್ಯಕ್ಷರಾಗಿ ಕಳೆದ ೫ ವರ್ಷಗಳಿಂದ ಉಮೇಶ್ ನಾಯಕ್ ಮಾಡುತ್ತಿರುವ ಸಾಹಿತ್ಯ ಸೇವೆ ಅತ್ಯಂತ ಅಚ್ಚುಕಟ್ಟಾಗಿ ನಡೆದಿದೆ ಎಂದು ಹೇಳಿದ ಅವರು, ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಮತ್ತು ಉಮೇಶ್ ನಾಯಕ್ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಪತ್ ವತಿಯಿಂದ ಸನ್ಮಾನಿಸಿದರು.


ಮತ್ತಷ್ಟು ಕಾರ‍್ಯಕ್ರಮ ನಡೆಯಲಿ- ಹರಿಪ್ರಸಾದ್:
ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಹರಿಪ್ರಸಾದ್ ಅವರು ಮಾತನಾಡಿ ಜಯರಾಮ ರೈ ಮಿತ್ರಂಪಾಡಿ ಮಹಾಪೋಷಕತ್ವದಲ್ಲಿ ಅದ್ಭುತವಾದ ಕಾರ‍್ಯಕ್ರಮ ಇಲ್ಲಿ ನಡೆದಿದೆ.ಈ ಕಾರ‍್ಯಕ್ರಮದಲ್ಲಿ ಸಹಕರಿಸಿದ ಉಮೇಶ್ ನಾಯಕ್, ಡಾ|ಹರ್ಷಕುಮಾರ್ ರೈ ಮತ್ತು ನಾರಾಯಣ ಕುಂಬ್ರ ಅವರ ಪ್ರಯತ್ನ ಮೆಚ್ಚುಗೆ ತಂದಿದೆ.ಕನ್ನಡ ಸಾಹಿತ್ಯ ಪರಿಷತ್ ಮೂಲಕ ಮತ್ತಷ್ಟು ಕಾರ‍್ಯಕ್ರಮ ನಡೆಯಲಿ ಎಂದರು.


ಸಾಹಿತ್ಯದ ಬೆಳವಣಿಗೆಗೆ ಪೂರಕ -ಅನಿಲ್ ಕುಮಾರ್ ಭೂಮರೆಡ್ಡಿ:
ದ.ಕ.ಜಿಲ್ಲಾ ಹೆಚ್ಚುವರಿ ಪೊಲೀಸ್ ಅಽಕ್ಷಕ ಅನಿಲ್ ಕುಮಾರ್ ಭೂಮ ರೆಡ್ಡಿ ಮಾತನಾಡಿ,ಸಾಹಿತ್ಯ ಸಂಘಟನೆಯಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮುಂಚೂಣಿಯಲ್ಲಿದೆ.ಜಯರಾಮ ರೈ ಮಿತ್ರಂಪಾಡಿ ಅವರ ಮಹಾಪೋಷಕತ್ವದಲ್ಲಿ ಉತ್ತಮ ಕಾರ್ಯಕ್ರಮ ನಡೆದಿದೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ಸಾಹಿತ್ಯದ ಬೆಳವಣಿಗೆ ಸಾಧ್ಯ ಎಂದರು.


ಪುತ್ತೂರು ತಾ.ಪಂ.ಕಾರ್ಯನಿರ್ವಾಹಕಾಽಕಾರಿ ನವೀನ್ ಕುಮಾರ್ ಭಂಡಾರಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶಶಿಕಲಾ, ದೇವಕಿ, ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಅಧ್ಯಕ್ಷ ರಮೇಶ್ಚಂದ್ರ,ಮುಖ್ಯಶಿಕ್ಷಕಿ ಆಶಾ ಬೆಳ್ಳಾರೆ, ದ.ಕ.ಕ.ಸಾ.ಪ.ಕೋಶಾಽಕಾರಿ ಐತ್ತಪ್ಪ ನಾಯ್ಕ್, ಚಿಗುರಲೆ ಸಾಹಿತ್ಯ ಬಳಗದ ಅಧ್ಯಕ್ಷ ಚಂದ್ರಮೌಳಿ ಕಡಂದೇಲು ಉಪಸ್ಥಿತರಿದ್ದರು. ಸಮಾರೋಪ ಕಾರ್ಯಕ್ರಮದಲ್ಲಿ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ.ವಿದ್ಯಾರ್ಥಿ ಜೀವನ್ ಎನ್ ಅವರು ಸಮಾರೋಪ ಭಾಷಣಗೈದರು.


ಪುತ್ತೂರು ಸಾಹಿತ್ಯೋತ್ಸವ ಸಂಚಾಲಕ ಡಾ|ಹರ್ಷ ಕುಮಾರ್ ರೈ ಮಾಡಾವು ಸ್ವಾಗತಿಸಿ, ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಆಶಯ ನುಡಿಗೈದರು. ಸಾಹಿತಿ ಅಬೂಬಕ್ಕರ್ ಅರ್ಲಪದವು ವಂದಿಸಿದರು. ಪತ್ರಕರ್ತ ಗಣೇಶ್ ಕಲ್ಲರ್ಪೆ ಮತ್ತು ಶ್ರೇಯ ಎಂ.ಜಿ.ಸುಳ್ಯ ಕಾರ‍್ಯಕ್ರಮ ನಿರೂಪಿಸಿದರು.


ಪುತ್ತೂರು ಸಾಹಿತ್ಯೋತ್ಸವ- ಸಾಹಿತ್ಯ ಜಾಗೃತಿ ಮೂಡಿಸಿದ ಕಾರ‍್ಯಕ್ರಮ:
ಪುತ್ತೂರು ನಗರಸಭೆ ವ್ಯಾಪ್ತಿಯ 33 ಶಾಲೆಗಳು, 17 ಕಾಲೇಜುಗಳು ಮತ್ತು 5 ಟ್ಯುಟೋರಿಯಲ್‌ಗಳ ಮತ್ತು 3 ಪ್ಯಾರಾ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳ ಸಾಹಿತ್ಯ ಚಟುವಟಿಕೆಗಳಿಗೆ ಪುತ್ತೂರು ಸಾಹಿತ್ಯೋತ್ಸವದಲ್ಲಿ ಅವಕಾಶ ನೀಡಲಾಯಿತು. ಬಾಲ ಸಾಹಿತಿಗಳ ಸಮಾವೇಶದಲ್ಲಿ 5 ವಿಶಿಷ್ಟ ಸಾಹಿತ್ಯ ಗೋಷ್ಠಿಗಳು ನಡೆಯಿತು. ವಿದ್ಯಾರ್ಥಿಗಳ ಸ್ವರಚಿತ ಕವನ ವಾಚನ ಮತ್ತು ಕಾವ್ಯಪ್ರತಿಭೆಯ ಅನಾವರಣ (ಕವನಗೋಷ್ಠಿ), ಜೀವನದಲ್ಲಿ ಪ್ರೇರಣೆಯ ಸ್ಥಾನ ಪಡೆದ ವ್ಯಕ್ತಿ/ಸಂಗತಿಯ ಕುರಿತು ಅಭಿವೃಕ್ತಿ(ನನ್ನ ಅಪ್ತಮಿತ್ರ), ಸ್ವರಚಿತ ಕಥೆಗಳ ಪ್ರಸ್ತುತಿ ಹಾಗು ಕಥೆ ಹೇಳುವ ಕಲೆಗೆ ಪ್ರೋತ್ಸಾಹ(ಕಥಾ ಗೋಷ್ಠಿ), ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮತ್ತು ಅನುಭವಗಳ ಹಂಚಿಕೆ(ನನ್ನ ಮೆಚ್ಚಿನ ಶಿಕ್ಷಕ/ಶಿಕ್ಷಕಿ), ಪ್ರವಾಸದ ಅನುಭವಗಳು, ಕಂಡ ಸ್ಥಳಗಳು, ಜನಜೀವನ ಮತ್ತು ಕಲಿತ ಪಾಠಗಳನ್ನು ಬರವಣಿಗೆ ಹಾಗು ಮಾತಿನ ಮೂಲಕ ವ್ಯಕ್ತಪಡಿಸುವ ಅವಕಾಶ(ಪ್ರವಾಸ ಕಥನ) ಕಾರ್ಯಕ್ರಮ ನಡೆಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಸ್ಮರಣಿಕೆಯೊಂದಿಗೆ ಗೌರವಾರ್ಪಣೆ ನಡೆಯಿತು.


ಕನ್ನಡದಲ್ಲೂ ಐಎಎಸ್ ಬರೆಯಿರಿ…..:
‘ಕನ್ನಡದಲ್ಲೂ ಐಎಎಸ್ ಬರೆಯಿರಿ’ ಎಂಬ ಅಭಿಯಾನದಡಿ ದರ್ಶನ್ ಗರ್ತಿಕೆರೆ ಅವರಿಂದ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಗಾರವೂ ನಡೆಯಿತು. ಜೊತೆಗೆ ಸುಮಾರು 55 ಮಂದಿ ಸಾಹಿತ್ಯ ಸೇವಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.


ಬಾಲ ಸಾಹಿತ್ಯ ಸಮಾವೇಶದಲ್ಲಿ ಪುತ್ತೂರು ನಗರ ಸಭಾ ವ್ಯಾಪ್ತಿಯ ೩೩ ಶಾಲೆ ಮತ್ತು ೧೬ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮನ್ಮಥ ಆಚಾರ್ಯ, ಕಥಾ ಗೋಷ್ಠಿಯ ಅಧ್ಯಕ್ಷತೆಯನ್ನು ಅಶ್ವಿಜ ಶ್ರೀಧರ್, ಪ್ರವಾಸ ಕಥನ ಅಧ್ಯಕ್ಷತೆಯನ್ನು ತಶ್ಮಿತಾ ಸುರೇಶ್, ನನ್ನ ನೆಚ್ಚಿನ ಶಿಕ್ಷಕ/ಶಿಕ್ಷಕಿ ಲೇಖನ ವಾಚನ ಅಧ್ಯಕ್ಷತೆಯನ್ನು ಮಾನಸ ವಿಜಯ್, ನನ್ನ ಆಪ್ತಮಿತ್ರ ಲೇಖನ ವಾಚನ ಅಧ್ಯಕ್ಷತೆಯನ್ನು ವಿಂಧ್ಯಾ ಎಸ್ ರೈ ವಹಿಸಿದ್ದರು. ಸಾಹಿತಿಗಳಾದ ವೀಣಾ ಜಗದೀಶ್, ಮಣಿ, ಅಕ್ಷತಾ ನಾಗನಕಜೆ, ಧನ್ಯಶ್ರೀ, ಶಿಲ್ವ, ಶಾರದಾ, ಶ್ವೇತಾ ಎನ್ ಆಚಾರ್ಯ, ಪೂರ್ಣಿಮಾ, ಶ್ವೇತಾ ರಮೇಶ್, ಶ್ರೀಕಲಾ, ಸಂಧ್ಯಾ, ದಿನೇಶ್, ಸುನೀತಾ, ಪ್ರತೀಕ್ಷಾ, ಹಂಸರಾಗ ಶೆಟ್ಟಿ ಹಾಗೂ ರಮ್ಯ ದಿನೇಶ್ ಅವರು ಸನ್ಮಾನಪತ್ರ ವಾಚಿಸಿದರು.ಮೋಹಿತಾ, ನಮಿತಮಣಿ, ಹರ್ಷಿತ, ಸುಪ್ರೀತಾ, ಚರಣ್, ಶ್ರೀಶಾವಾಸವಿ, ಅಕ್ಷತಾ, ಅಶ್ವಿಜ
ಶ್ರೀಧರ್ ಹಾಗೂ ಪೂರ್ಣಿಮಾರವರು ಗೋಷ್ಟಿಗಳ ನಿರ್ವಹಣೆ ಮಾಡಿದರು. ಹಾರಾಡಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ವಿವೇಕಾನಂದ ಶಾಲೆಯ ಶ್ರೀರಕ್ಷಾ, ಶಾರ್ವರಿ, ದೀಕ್ಷಾ, ಶಮಿತಾ ಮತ್ತು ಮೌಲ್ಯ ನಾಡಗೀತೆ ಹಾಡಿದರು.


ಮೆರವಣಿಗೆ:
ತಾಯಿ ಭುವನೇಶ್ವರಿ ಮೆರವಣಿಗೆ, ಪಟ್ಟಾಭಿರಾಮ ಸುಳ್ಯ ಅವರಿಂದ ಮಿಮಿಕ್ರಿ,ಮಕ್ಕಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟ, ಸಂಜೆ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.೭೫೦ಕ್ಕೊ ಹೆಚ್ಚು ಮಂದಿ ಭಾಗವಹಿಸಿದ್ದರು.ರಾಜ್ಯದಲ್ಲೇ ಮೊದಲ ಬಾರಿ ಎನ್ನುವಂತೆ ಪುತ್ತೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಘೋಷವಾಕ್ಯದೊಂದಿಗೆ ಗ್ರಾಮ ಸಾಹಿತ್ಯ ಸಂಭ್ರಮ ನಡೆದು, ಆ ಮೂಲಕ ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿ, ಇದೀಗ ಪುತ್ತೂರು ನಗರ ವ್ಯಾಪ್ತಿಯಲ್ಲಿ ನಡೆದಿರುವ ಪುತ್ತೂರು ಸಾಹಿತ್ಯೋತ್ಸವ ಕಾರ‍್ಯಕ್ರಮ ರಾಜ್ಯಕ್ಕೇ ಮಾದರಿಯಾಗುವ ರೀತಿಯಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿದೆ.ಈ ಕಾರ್ಯಕ್ರಮ ಅತ್ಯಂತ ಸಂಭ್ರಮ, ಸಡಗರದಿಂದ ನಡೆಯಲು ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆಗಳು
-ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಮಹಾಪೋಷಕರು, ಪುತ್ತೂರು ಸಾಹಿತ್ಯೋತ್ಸವ

32 ಗ್ರಾಮಗಳ ಯಶಸ್ವಿ ಪಯಣದ ಹಿನ್ನೆಲೆಯಲ್ಲಿ ಗ್ರಾಮ ಸಾಹಿತ್ಯ ಸಂಭ್ರಮದ ಸಮಾರೋಪ ಮತ್ತು ನಗರಸಭಾ ವ್ಯಾಪ್ತಿಯ ವಿದ್ಯಾರ್ಥಿಗಳಿಗಾಗಿ ಬಾಲ ಸಾಹಿತಿಗಳ ಸಮಾವೇಶ ಕಾರ್ಯಕ್ರಮ ಬೆಳಗ್ಗೆ ಗಂಟೆ 10ರಿಂದ ಸಂಜೆ ಗಂಟೆ 4ರ ತನಕ ನಡೆಯಿತು. ಕಾರ‍್ಯಕ್ರಮ ಜಿಲ್ಲಾ ಸಾಹಿತ್ಯ ಸಮ್ಮೇಳನದಂತೆ ಆಗಿದೆ ಎಂಬುದು ಖುಷಿಯ ವಿಚಾರ.ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಅವರು ನಮಗೆ ಆರ್ಥಿಕ ಶಕ್ತಿಯನ್ನು ಒದಗಿಸಿದ್ದಾರೆ. ಹಿಂದಿನ ಶಾಸಕ ಸಂಜೀವ ಮಠಂದೂರು ಅವರ ಅವಽಯಲ್ಲಿ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್‌ಗೆ ಕನ್ನಡ ಭವನ ನಿರ್ಮಾಣಕ್ಕೆಂದು ೯ ಸೆಂಟ್ಸ್ ಜಾಗ ಮಂಜೂರಾಗಿದ್ದು ಪ್ರಸ್ತುತ ಶಾಸಕರಾಗಿರುವ ಅಶೋಕ್ ಕುಮಾರ್ ಅವರ ಅವಽಯಲ್ಲಿ ಅಲ್ಲಿ ಕನ್ನಡ ಭವನ ನಿರ್ಮಾಣ ಯೋಜನೆ ಹಮ್ಮಿಕೊಳ್ಳಲಾಗಿದೆ
-ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷರು, ಪುತ್ತೂರು ತಾ|ಕನ್ನಡ ಸಾಹಿತ್ಯ ಪರಿಷತ್


ಸಾಹಿತಿಗಳ ಉದಯವಾಗಿದೆ -ಸಾಯೀಶ್ವರಿ
ಪುತ್ತೂರು ಸಾಹಿತ್ಯೋತ್ಸವದ ಸರ್ವಾಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿನಿ ಸಾಯೀಶ್ವರಿ ಮಾತನಾಡಿ,ಶಿವರಾಮ ಕಾರಂತರು ನಡೆದಾಡಿದ ಪುತ್ತೂರಿನ ಮಣ್ಣಿನಲ್ಲಿ ಅನೇಕ ಮಂದಿ ಸಾಹಿತಿಗಳ ಉದಯವಾಗಿದೆ.ಸಾಹಿತ್ಯವನ್ನು ಉಳಿಸುವುದು, ಬೆಳೆಸುವುದು ನಮ್ಮ ಕರ್ತವ್ಯ ಎಂದರು.ನಾನಿನ್ನೂ ಸಾಹಿತ್ಯದಲ್ಲಿ ಬೆಳೆಯುವ ಕೂಸು.ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸಲು ಕಾರಣಕರ್ತರಾದ ಸಾಹಿತ್ಯ ಪರಿಷತ್‌ನವರಿಗೆ,ಕಾರ‍್ಯಕ್ರಮಕ್ಕೆ ಮಹಾ ಪೋಷಕರಾದ ಜಯರಾಮ ರೈ ಮಿತ್ರಂಪಾಡಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.


14 ಮಂದಿಗೆ ಸಾಧಕ ಪುರಸ್ಕಾರ 2 ಸಂಘ-ಸಂಸ್ಥೆಗಳಿಗೆ ಸಾಹಿತ್ಯ ಪುರಸ್ಕಾರ
ಪುತ್ತೂರು ಸಾಹಿತ್ಯೋತ್ಸವದಲ್ಲಿ 14 ಮಂದಿ ಸಾಧಕರಿಗೆ ಮತ್ತು 2 ಸಂಘ ಸಂಸ್ಥೆಗಳಿಗೆ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು.ಸಾಹಿತ್ಯ ಕ್ಷೇತ್ರದಲ್ಲಿ ಉಪತಹಸಿಲ್ದಾರ್ ಸುಲೋಚನಾ ಪಿ.ಕೆ.,ಸಾಹಿತ್ಯ ಪೋಷಕರಲ್ಲಿ ಅವಿನಾಶ್ ಭಂಡಾರ್ಕರ್, ತುಳು ಲಿಪಿ ಸಾಹಿತ್ಯದಲ್ಲಿ ಅಪರ್ಣ ಕೊಡಂಕೀರಿ,ಸಮಾಜ ಸೇವೆಯಲ್ಲಿ ಅಬ್ದುಲ್ ರಜಾಕ್ ಬಪ್ಪಳಿಗೆ,ಚಿತ್ರಕಲೆಯಲ್ಲಿ ಪ್ರವೀಣ್ ವರ್ಣಕುಟೀರ,ಸಂಘಟನೆಯಲ್ಲಿ ಆಸ್ಕರ್ ಆನಂದ್,ಆಯುರ್ವೇದ ಕ್ಷೇತ್ರದಲ್ಲಿ ಡಾ.ಪ್ರದೀಪ್ ಕುಮಾರ್ ಕೋಟೆಕ್ಕಲ್, ಉರಗ ಸಂರಕ್ಷಣೆಯಲ್ಲಿ ತೇಜಸ್, ಭರತನಾಟ್ಯ ಕ್ಷೇತ್ರದಲ್ಲಿ ಕಲೋಪಾಸನಾ ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದುಷಿ ಶಾಲಿನಿ ಆತ್ಮಭೂಷಣ್, ವಿಶೇಷ ಮಕ್ಕಳ ಸೇವಾ ಕ್ಷೇತ್ರದಲ್ಲಿ ತನುಜಾ ಝೇವಿಯರ್, ಕ್ರಿಯಾತ್ಮಕ ಕಲಾ ನಿರ್ದೇಶಕರಲ್ಲಿ ಬಿ.ಕೆ.ಗಣೇಶ್ ರೈ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುದ್ದಿ ಬಿಡುಗಡೆ ಸಿಇಒ ಸೃಜನ್ ಊರುಬೈಲು, ಮಕ್ಕಳ ಸಾಹಿತ್ಯ, ವ್ಯಂಗ್ಯ ಚಿತ್ರಕಲಾ ಕ್ಷೇತ್ರದಲ್ಲಿ ಸುದ್ದಿ ಬಿಡುಗಡೆ ಬರಹಗಾರ ನಾರಾಯಣ ರೈ ಕುಕ್ಕುವಳ್ಳಿ,ಸಂಘ ಸಂಸ್ಥೆ ವಿಭಾಗದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಮತ್ತು ರಮಣಿ ಬಾಲ ಸಮಿತಿ ಶಿವನಗರ ಪುತ್ತೂರು ಇವರಿಗೆ ಸಾಧಕ ಪುರಸ್ಕಾರ ಪ್ರದಾನ ಮಾಡಲಾಯಿತು.


ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಸಿಗುವುದು ಕಡಿಮೆ.ಹಾಗಾಗಿ ಈ ಪರಿಕಲ್ಪನೆಯೊಂದಿಗೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಎಲ್ಲಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳೇ ಅಧ್ಯಕ್ಷತೆ ವಹಿಸುತ್ತಿದ್ದರು. ಮಿತ್ರಂಪಾಡಿ ಜಯರಾಮ ರೈಯವರ ಮಹಾಪೋಷಕತ್ವದಲ್ಲಿ ಪುತ್ತೂರು ಸಾಹಿತ್ಯೋತ್ಸವ ಉತ್ತಮವಾಗಿ ನಡೆದಿದೆ
ಡಾ|ಹರ್ಷಕುಮಾರ್ ರೈ ಮಾಡಾವು


ಸಂಚಾಲಕರು, ಪುತ್ತೂರು ಸಾಹಿತ್ಯೋತ್ಸವ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ಆರಂಭಗೊಂಡ ಗ್ರಾಮ ಸಾಹಿತ್ಯ ಸಂಭ್ರಮವು ಕಳೆದ 5 ವರ್ಷಗಳಲ್ಲಿ 32 ಗ್ರಾಮಗಳ 133ಕ್ಕೂ ಅಧಿಕ ಶಾಲಾ ಕಾಲೇಜುಗಳ 5,700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿದೆ. ಅಲ್ಲದೆ ಗ್ರಾಮೀಣ ಮಟ್ಟದ 200ಕ್ಕೂ ಹೆಚ್ಚು ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ
ನಾರಾಯಣ ಕುಂಬ್ರ ಸಂಚಾಲಕರು, ಗ್ರಾಮ ಸಾಹಿತ್ಯ ಸಂಭ್ರಮ

LEAVE A REPLY

Please enter your comment!
Please enter your name here