







ಪುತ್ತೂರು: ಆನೆಗುಂದಿ ಗುರು ಸೇವಾ ಪರಿಷತ್ ಮಹಾಮಂಡಲ ಪುತ್ತೂರು ಇದರ ವತಿಯಿಂದ ಕೂಡುವಳಿಕೆ ಮೊಕ್ತೇಸರರ ಮನೆಯಲ್ಲಿ ನಡೆಯುವ ಮನೆಮನೆ ಗಾಯತ್ರಿ ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿ ಆನೆಗುಂದಿ ಗುರು ಸೇವಾ ಪರಿಷತ್ ಮಹಾಮಂಡಲದ ಪುತ್ತೂರು ಘಟಕ ವಿನಂತಿಸಿದೆ.


ಅ.25ರಂದು ವಿಶ್ವಕರ್ಮ ಸಭಾಭವನ ಪುತ್ತೂರಿನಲ್ಲಿ ನಡೆದ ಮನೆ ಮನೆ ಗಾಯತ್ರಿ ಅಭಿಯಾನ ಹಾಗೂ ಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತ ಕಮಿಟಿ ರಚನೆಯ ಬಗ್ಗೆ ಮತ್ತು ವಿಶ್ವಕರ್ಮ ಕಲಾ ಪರಿಷತ್ತಿನ ಸಮ್ಮೇಳನದ ಬಗ್ಗೆ ಸಭೆ ನಡೆದಿತ್ತು. ಸಭೆಯಲ್ಲಿ ವಿವಿಧ ಸಲಹೆ ಸೂಚನೆಗಳು ವ್ಯಕ್ತವಾಗಿತ್ತು. ಮುಂದಿನ ದಿನ ಕೂಡುವಳಿಕೆ ಮೊಕ್ತೇಸರರ ಮನೆಯಲ್ಲಿ ನಡೆಯುವ ಮನೆಮನೆ ಗಾಯತ್ರಿ ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿ ಸಭೆಯಲ್ಲಿ ವಿನಂತಿಸಲಾಯಿತು. ಸಭೆಯ ಆರಂಭದಲ್ಲಿ ಸಮಾಜಮುಖಿ ಚರ್ಚೆಗಳು ನಡೆದ ಕಾರಣ ಸ್ವಲ್ಪ ತಡವಾಯಿತು. ಎಲ್ಲರು ತಾಳ್ಮೆಯಿಂದ ಸಹಕರಿಸಿರುವುದಕ್ಕೆ ಆನೆಗುಂದಿ ಗುರುಸೇವಾ ಪರಿಷತ್‌ನ ಪುರುಷೋತ್ತಮ ಆಚಾರ್ಯ ಕೃತಜ್ಞತೆ ಸಲ್ಲಿಸಿದ್ದಾರೆ.













