ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಕು. ದೀಕ್ಷಾ.ಬಿ.ಎಸ್ ಗೆ ಪ್ರಥಮ ಸ್ಥಾನ

0

ಎನ್.ಸಿ.ಇ.ಆರ್.ಟಿಯವರು ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (Common Entrance Examination) ಕು. ದೀಕ್ಷಾ ಬಿ ಎಸ್ ಇವರು ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನವನ್ನು ಗಳಿಸಿದ್ದಾರೆ.

ಇಲ್ಲಿ ಆಯ್ಕೆಯಾದವರು ಆರ್ ಐ ಇ (Regional Institution of Education) ಗಳಲ್ಲಿ ಮೂಲವಿಜ್ಞಾನಗಳನ್ನು ಓದಲು ಅರ್ಹತೆಯನ್ನು ಪಡೆಯುತ್ತಾರೆ. ದೀಕ್ಷಾ ಬಿ ಎಸ್ ಇವರು ಆರ್ ಐ ಇ ಮೈಸೂರಿನಲ್ಲಿ ಉನ್ನತವ್ಯಾಸಂಗಕ್ಕೆ ಆಯ್ಕೆಯಾಗಿದ್ದಾರೆ.

ಎಂ ಎಸ್ ಸಿ  ಇಡಿ ಮತ್ತು ಬಿಎಸ್ ಸಿ  ಇಡಿ ಪದವಿಗೆ ಅರ್ಹತೆ ಪಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಇವರು ಎಂ ಎಸ್ ಸಿ  ಇಡಿ ಗಣಿತ ಮತ್ತು ಎಂ ಎಸ್ ಸಿ  ಇಡಿ ರಸಾಯನಶಾಸ್ತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ  ಸ್ಥಾನವನ್ನು, ಬಿಎಸ್ ಸಿ ಇಡಿ  ನಲ್ಲಿ ರಾಜ್ಯಕ್ಕೆ ಮೊದಲ  ಸ್ಥಾನವನ್ನು ಪಡೆದಿದ್ದಾರೆ.

ಈ ಮೊದಲು ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ 593 (98.83) ಅಂಕವನ್ನು ಸಂಪಾದಿಸಿ ರಾಜ್ಯಕ್ಕೆ ಆರನೇ ಸ್ಥಾನವನ್ನು ಸಂಪಾದಿಸಿದ್ದರು. ಸಿಇಟಿ ಯಲ್ಲೂ ಉತ್ತಮ ಸ್ಥಾನ ಪಡೆದಿರುವ ಇವರು ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಮತ್ತು ಉಜಿರೆ ಎಸ್ ಡಿ ಎಮ್ ಆಂಗ್ಲಮಾಧ್ಯಮ ಶಾಲೆಯ (CBSE) ಹಿರಿಯ ವಿದ್ಯಾರ್ಥಿನಿ.

ಮೂಲತಃ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಾಲೀಗದ್ದೆಯವರಾದ ಇವರು ಸಂಗೀತದಲ್ಲಿ ಜ್ಯೂನಿಯರ್ ಮತ್ತು ಭರತನಾಟ್ಯದಲ್ಲಿ ಸೀನಿಯರ್ ಪರೀಕ್ಷೆ ಮುಗಿಸಿದ್ದಾರೆ. ಉಜಿರೆಯ ಎಸ್ ಡಿ ಎಂ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಡಾ ಶ್ರೀಧರ ಭಟ್ ಮತ್ತು ಉಜಿರೆ ಹಳೆಪೇಟೆಯ ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕಿ  ವೀಣಾ ಶ್ಯಾನಭಾಗ ಇವರ ಸುಪುತ್ರಿ.

LEAVE A REPLY

Please enter your comment!
Please enter your name here