ಪಡಂಗಡಿ: ಸಾಧಾರಣ ಕಡಿಮೆ ತೂಕದ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಪ್ರೊಟೀನ್ ಪೌಡರ್ ವಿತರಣಾ ಕಾರ್ಯಕ್ರಮ

0

ಪಡಂಗಡಿ:  ರೋಟರಿ ಕ್ಲಬ್ ಮಡಂತ್ಯಾರು, ಜಿಲ್ಲಾ ಅರೋಗ್ಯ ಸಿರಿ ಯೋಜನೆಯಡಿಯಲ್ಲಿ ಬ್ರಿಟಿಷ್ ಬಯೋಲಾಜಿಕಲ್ ಸಂಸ್ಥೆ ಬೆಂಗಳೂರು ಹಾಗೂ ಮಹಾವೀರ ಮೆಡಿಕಲ್ ಮಡಂತ್ಯಾರು ಇವರ ಪ್ರಯೋಜಕತ್ವದೊಂದಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರ ಪಡಂಗಡಿ ಯಲ್ಲಿ “ಸಾಧಾರಣ ಕಡಿಮೆ ತೂಕದ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಪ್ರೊಟೀನ್ ಪೌಡರ್ ವಿತರಣಾ ಕಾರ್ಯಕ್ರಮ” ವನ್ನು ಸೆ.19ರಂದು ನಡೆಸಲಾಯಿತು.

ಸುಮಾರು 26 ಕಡಿಮೆ ತೂಕದ ಮಕ್ಕಳಿಗೆ ಉಚಿತ ತಪಾಸಣೆಯನ್ನು ನಡೆಸಿ, ಪ್ರೊಟೀನ್ ಪೌಡರ್ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 8 ಮಂದಿ ರೋಟರಿ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಪೂರ್ಣ ಸಹಕಾರವನ್ನು ನೀಡಿದರು.

LEAVE A REPLY

Please enter your comment!
Please enter your name here