ಗೋವಿಂದೂರು ಸ. ಉ. ಹಿ. ಪ್ರಾ. ಶಾಲೆಯಲ್ಲಿ ಇಂಟರ್ಲಾಕ್ ಉದ್ಘಾಟನೆ

0

ಬೆಳ್ತಂಗಡಿ:ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋವಿಂದೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.19 ರಂದು ಇಂಟರ್ಲಾಕ್ ಉದ್ಘಾಟನೆ ಹಾಗೂ ಶಾಲಾಭಿವೃದ್ದಿಯ ಆಶಾ ಕಿರಣ ಕಾರ್ಯಕ್ರಮ ಜರಗಿತು.

ಹಿರಿಯರಾದ ಜಗನ್ನಾಥ್.ಬಿ. ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ. ಸುಭಾಷಿಣಿ.ಕೆ.ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ರೇಶ್ಮಾ.ಎಮ್.ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜ್ಯ ಮಟ್ಟದ ಉತ್ತಮ ಸಿ.ಆರ್.ಪಿ ಪ್ರಶಸ್ತಿ ಪಡೆದ ರಾಜೇಶ್ ಆಚಾರ್ಯ ಇವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶ್ರೀಮತಿ.ಕುಸುಮಾ ಎನ್.ಬಂಗೇರ, ವಸಂತ ಮಜಲು, ಪಿ.ಡಿ.ಓ ಸಂತೋಷ್ ಪಾಟೀಲ್, ಗ್ರಾ.ಪಂ ಸದಸ್ಯರುಗಳಾದ ಸುದಾಕರಮಜಲು,ಅಬ್ದುಲ್ ಕರೀಮ್, ಯಶೋದರ ಶೆಟ್ಟಿ ಲತೀಪ್ ಪರಿಮ, ಶ್ರೀಮತಿ ಇಂದಿರಾ, ನಿವೃತ್ತ ಮುಖ್ಯೋಪಾದ್ಯಾಯಿನಿ ಶ್ರೀಮತಿ ಸುಮಿತ್ರಾ ಎಮ್.ವೈ., ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ತುಕರಾಮ ಪೂಜಾರಿ, ಗ್ರಾಮ ಪಂಚಾಯತ್ ಮಾಜಿ ಉಪಾದ್ಯಕ್ಷೆ ಶ್ರೀಮತಿ.ಅಸ್ಮಾ , ಎಸ್.ಡಿ.ಎಮ್.ಸಿ ಅಧ್ಯಕ್ಷ ಅಝೀಝ್ ಗೋವಿಂದೂರು, ಉಪಾದ್ಯಕ್ಷರಾದ ಶ್ರೀಮತಿ ಸುಮತಿ, ಹೈದರ್ ಎಲ್ತ್ರಡ್ಕ, ದಿನೇಶ್ ಪೂಜಾರಿ, ನಿತೇಶ್ ಮಜಲು, ಕುಂಞಮೋನು,ಅಬೂಬಕ್ಕರ್, ಉಮೇಶ್ ಗೋವಿಂದೂರು, ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ಫಾತಿಮತ್ ರನಿಯ ಸ್ವಾಗತಿಸಿದರು. ಅತಿಥಿ ಶಿಕ್ಷಕಿ ಶ್ರೀಮತಿ ಸ್ವಾತಿ.ಕೆ. ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಶ್ರೀಮತಿ ದಿವ್ಯಾ ಧನ್ಯವಾದವಿತ್ತರು.

ಆದರ್ಶ್ ಕೊರೆಯ, ಸಂತೋಷ್ ಮೋರಾಸ್, ಹಕೀಮ್ ಗೋವಿಂದೂರು, ಸಿದ್ದೀಕ್ ಸಹಕರಿಸಿದರು.

LEAVE A REPLY

Please enter your comment!
Please enter your name here