ರಿಕ್ಷಾಕ್ಕೆ‌ ಅಡ್ಡ ಬಂದ ಕಾಡು ಹಂದಿ ರಿಕ್ಷಾ ಪಲ್ಟಿ : ಚಾಲಕ ಜಖಂ

0

 

 

ನಡು ಮಧ್ಯಾಹ್ನ ಕಾಡು ಹಂದಿ ರಿಕ್ಷಾಕ್ಕೆ ಅಡ್ಡ ಬಂದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಚಾಲಕ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದೆ.

ಕನ್ಯಾನದ ಸುರೇಶರು ತಮ್ಮ ರಿಕ್ಷಾದಲ್ಲಿ ಮಧ್ಯಾಹ್ನ 12 ರ ಸುಮಾರಿಗೆ ಮನೆಯಿಂದ ಮಂಡೆಕೋಲಿಗೆ ಬರುತ್ತಿದ್ದಾಗ ತೋಟಪ್ಪಾಡಿ ಎಂಬಲ್ಲಿ ಕಾಡು ಹಂದಿಯೊಂದು ರಸ್ತೆಗೆ ಜಿಗಿದು ರಿಕ್ಷಾಕ್ಕೆ ತಾಗಿತೆಂದೂ ಪರಿಣಾಮ ಸುರೇಶ ರು ಬ್ರೇಕ್ ಹಾಕಿದಾಗ ರಿಕ್ಷಾ ಪಲ್ಟಿಯಾಯಿತು.

ಸುರೇಶರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here