ಎಸ್  ಡಿ ಎಂ ಶಿಕ್ಷಣ ಸಂಸ್ಥೆಗಳ ಐಟಿ ಕನ್ಸಲ್ಟೆನ್ಸಿ ವಸತಿ ನಿಲಯಗಳ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಪೂರನ್ ವರ್ಮ ನೇಮಕ

0

ಉಜಿರೆ:  ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ಕನ್ಸಲ್ಟೆನ್ಸಿ ಮತ್ತು ವಸತಿ ನಿಲಯಗಳ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಪೂರನ್ ವರ್ಮ ಅವರು  ನೇಮಕಗೊಂಡಿದ್ದಾರೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್  ಸೊಸೈಟಿಯ ಕಚೇರಿಯಲ್ಲಿ  ಸೆ.23 ರಂದು  ನಡೆದ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ   ಅವರು ಪೂರನ್ ವರ್ಮ ಅವರಿಗೆ ಪುಷ್ಪಗುಚ್ಛ ನೀಡಿ ಅಧಿಕೃತವಾಗಿ ಜವಾಬ್ದಾರಿ ನೀಡಿದರು . ಬಳಿಕ ಮಾತನಾಡಿದ ಡಾ. ಸತೀಶ್ಚಂದ್ರ  ಅವರು ಪ್ರಸ್ತುತ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಮಾಹಿತಿ ತಂತ್ರಜ್ಞಾನವು ಅಗತ್ಯವಾಗಿದೆ ಪೂರನ್ ವರ್ಮ ಅವರು ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು ಅವರಲ್ಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕುರಿತ ಜ್ಞಾನ ಹಾಗೂ ತಮ್ಮ ತಂದೆಯವರೊಂದಿಗೆ ಒಡನಾಟದ ಅನುಭವದಿಂದ ಸಂಸ್ಥೆಗೆ ಮಹತ್ತರ ರೀತಿಯಲ್ಲಿ ಪ್ರಯೋಜನವಾಗಲಿ ಎಂದು ಅವರು ಹಾರೈಸಿದರು.

ಪೂರನ್ ವರ್ಮ   ಮಾತನಾಡಿ ತಂತ್ರಜ್ಞಾನವು ಬದಲಾಗುತ್ತಿದ್ದ ಹಾಗೆ ಆ ಬದಲಾವಣೆಗಳಿಗೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ.  ತಂತ್ರಜ್ಞಾನಕ್ಕೆ  ಒಗ್ಗಿ ಹೋಗಿರುವ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳು ಬದಲಾವಣೆ ಕಂಡುಕೊಳ್ಳುವ ಅಗತ್ಯ ಈ ನಿಟ್ಟಿನಲ್ಲಿ ನೂತನ ಆವಿಷ್ಕಾರ ತಂತ್ರಜ್ಞಾನಗಳನ್ನು ನಮ್ಮದಾಗಿಸಿಕೊಳ್ಳುತ್ತಾ ನಾವೆಲ್ಲರೂ ಕಾರ್ಯ ಪ್ರವೃತ್ತರಾಗೋಣ ಎಂದರು .

ಶ್ರೀಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ,  ಸಿಬ್ಬಂದಿ ವರ್ಗ ಉಸಿತರಿದ್ದರು.

LEAVE A REPLY

Please enter your comment!
Please enter your name here