ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಮೈರಲ್ಕೆ ಓಡಿಲ್ನಾಳ ಇದರ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

0

ಓಡಿಲ್ನಾಳ:  ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಮೈರಲ್ಕೆ ಓಡಿಲ್ನಾಳ ಇದರ ಬ್ರಹ್ಮಕಲಶೋತ್ಸವದ ಪೂರಕವಾಗಿ ಭಕ್ತಾಭಿಮಾನಿಗಳ ಸಭೆಯನ್ನು ಅ 16ರಂದು ದೇವಸ್ಥಾನದ ವಠಾರದಲ್ಲಿ ಜೀರ್ಣೋಧ್ಧಾರ ಸಮಿತಿ ಕಾರ್ಯಧ್ಯಕ್ಷ ಜಯರಾಮ್ ಎಸ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು.

ಬೆಳಿಗ್ಗೆ ಗಣಹೋಮ ಹಾಗೂ ದೇವರಿಗೆ ವಿಶೇಷ ಪೂಜೆ ನಡೆಯಿತು. ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಸಮಿತಿ ಪಧಾದಿಕಾರಿಗಳ ಆಯ್ಕೆ ಹಾಗೂ ಉಪ ಸಮಿತಿಗಳನ್ನು ರಚಿಸಲಾಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮಾಜಿ ಶಾಸಕ ವಸಂತ ಬಂಗೇರ , ಕಾರ್ಯದರ್ಶಿ ಚಂದ್ರಹಾಸ್ ಕೇದೆ,  ಕೋಶಾಧಿಕಾರಿ ಗೋಪಾಲ ಶೆಟ್ಟಿ ಕೋರ್ಯಾರು, ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ ನ ಅಧ್ಯಕ್ಷ ವ್ರಷಭ ಆರಿಗ ಪರಾರಿ, ಪವಿತ್ರ ಪಾಣಿ ಮೋಹನ್ ಕೆರ್ಮುಣ್ಣಾಯ ಮೈರಾರು, ಗೋಪಿನಾಥ್ ನಾಯಕ್ ಗುರುವಾಯನಕೆರೆ , ನಾರಾಯಣ ಭಟ್ ನಡುಮನೆ, ದೇವಸ್ಥಾನದ ಅರ್ಚಕರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here