ದ. ಕ.ಜಿ. ಪಂ. ಸ. ಹಿ. ಪ್ರಾ. ಶಾಲೆ ಗುತ್ತಿನಬೈಲು ವಿದ್ಯಾರ್ಥಿಗಳಿಗೆ ದಾನಿಗಳಿಂದ ಉಚಿತ ಟೈ, ಬೆಲ್ಟ್, ಐಡಿ ಹಸ್ತಾಂತರ

0

ಸವಣಾಲು: ದ. ಕ.ಜಿ. ಪಂ. ಸ. ಹಿ. ಪ್ರಾ. ಶಾಲೆ ಗುತ್ತಿನಬೈಲು ಇಲ್ಲಿ ದಾನಿಗಳಸಹಕಾರದಿಂದ ಎಲ್ಲಾ ಮಕ್ಕಳಿಗೆ ಉಚಿತ ಟೈ, ಬೆಲ್ಟ್, ಐಡಿಯನ್ನು ನ.2ರಂದು ವಿತರಿಸಲಾಯಿತು.

ಟೈ ಬೆಲ್ಟ್ ನ ಪ್ರಾಯೋಜಕತ್ವವನ್ನು  ಮೊಹಮ್ಮದ್ ಮಿರ್ಷಾದ್ ಎಸ್. ಎಚ್. ಎ. ವುಡ್ ಡೆಕೋರೇಟಿವ್ ಅಂಡ್ ಪ್ಲೈವುಡ್ ಹಾಗೂ ಮೊಹಮ್ಮದ್ ಶರೀಫ್ , ಐಡಿ ಪ್ರಾಯೋಜಕತ್ವವನ್ನು   ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ  ಭೋಜಪೂಜಾರಿ ಹಾಗೂ ಸದಸ್ಯರಾದ  ಪ್ರಭಾಕರ್ ಭಟ್ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಶಿಕ್ಷಣ ಸಾರಥಿ ಪ್ರಶಸ್ತಿ ಪಡೆದ ಗುರುವಾಯನಕೆರೆ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ  ರಾಜೇಶ್ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ದಲ್ಲಿ ಸಹ ಶಿಕ್ಷಕ  ವಸಂತ ಗುಡಿಗಾರ್  ಸ್ವಾಗತವನ್ನು ಮಾಡಿದರು.   ಪುರಸ್ಕೃತರ ಕಿರುಪರಿಚಯವನ್ನು ಅತಿಥಿ ಶಿಕ್ಷಕರಾದ  ದಿನೇಶ್ ಕೆ, ಧನ್ಯವಾದ ಕಾರ್ಯಕ್ರಮವನ್ನು ಸಹ ಶಿಕ್ಷಕಿ ಶ್ಯಾಮಲಾ ಕೆ , ನಿರೂಪಣೆಯನ್ನು  ನಮಿತಾ ಆರ್  ನಿರ್ವಹಿಸಿದರು.

ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ  ಕೃಷ್ಣಪ್ಪ ಎಂ.ಕೆ. ಗುತ್ತಿನಬೈಲು ಅಂಗನವಾಡಿ ಕಾರ್ಯಕರ್ತೆ ಯಾದ  ಸುಮಂಗಲ ಹಾಜರಿದ್ದರು.

LEAVE A REPLY

Please enter your comment!
Please enter your name here