ನಾರಾವಿ ವಲಯದಲ್ಲಿ 10 ನೇ ವರ್ಷದ ಪಾದಯಾತ್ರೆ ಪೂರ್ವಭಾವಿ ಸಭೆ

0

ನಾರಾವಿ: ನಾರಾವಿ ವಲಯದಲ್ಲಿ 10 ನೇ ವರ್ಷದ ಪಾದಯಾತ್ರೆ ಪೂರ್ವಭಾವಿ ಸಭೆಯನ್ನು ಸೂರ್ಯನಾರಾಯಣ ದೇವಸ್ಥಾನ ದಲ್ಲಿ ನಡೆಸಲಾಯಿತು.

ಈ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಒಕ್ಕೂಟದ ಅಧ್ಯಕ್ಷ  ಸದಾನಂದ ಬಂಗೇರ ವಹಿಸಿಕೊಂಡರು.

ವೇದಿಕೆಯಲ್ಲಿ ತಾಲೂಕು ಜನಜಾಗೃತಿ ತಾಲೂಕು ಸಮಿತಿಯ ಪದಾಧಿಕಾರಿಯವರಾದ ಜಯರಾಜು ಹಾಗೂ ಸದಾನಂದ ಗೌಡ ಹಾಗೂ ಸೂರ್ಯ ನಾರಾಯಣ ದೇವಸ್ಥಾನ ಆಡಳಿತ ಮುಕ್ತೆಶ್ವರ ರು ನಿರಂಜನ್ ಅಜ್ರಿ ಹಾಗೂ ಪ್ರಗತಿ ಪರ ಕೃಷಿಕರು ರತ್ನಕರ ಭಟ್ ಹಾಗೂ ತಾಲೂಕು ಯೋಜನಾಧಿಕಾರಿಗಳು ಯಶವಂತ್ ಮಾತನಾಡಿ ಪಾದಯಾತ್ರೆ ಬಗ್ಗೆ ಮಾಹಿತಿ ನೀಡಿದರು ಹಾಗೂ ಒಕ್ಕೂಟ ದ ಅಧ್ಯಕ್ಷರು ಗಳು ಪದಾಧಿಕಾರಿಗಳು, ಗ್ರಾಮದ ಪ್ರಮುಖರು, ಸದಸ್ಯರು, ವಿಪತ್ತು ನಿರ್ವಹಣೆ ಸ್ವಯಂ ಸೇವಕರು, ಸೇವಾಪ್ರತಿನಿಧಿ ಉಪಸ್ಥಿತರಿದ್ದರು.

ಮೇಲ್ವಿಚಾರಕರು  ದಮಯಂತಿ ನಿರೂಪಣೆ ಮಾಡಿ,  ಸೇವಾಪ್ರತಿನಿಧಿ ಹರಿನಾಕ್ಷಿ ಸ್ವಾಗತಿಸಿ ಹಾಗೂ ಸೇವಾಪ್ರತಿನಿಧಿ ಶಶಿಧರ್ ಕುಲಾಲ್ ವಂದಿಸಿದರು.

LEAVE A REPLY

Please enter your comment!
Please enter your name here