ಅಂತರ್ ರಾಷ್ಟ್ರೀಯ ಕರಾಟೆ ಚಾಂಪಿಯನ್ ಆದ ವಿದ್ಯಾರ್ಥಿಗಳಿಗೆ ಗುರುದೇವ ಕಾಲೇಜಿನಲ್ಲಿ ಸ್ವಾಗತ ಮತ್ತು ಅಭಿನಂದನೆ

0

ಬೆಳ್ತಂಗಡಿ :ಬೆಳ್ತಂಗಡಿ ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಶಾಹೀರ್ ಅಸನ್, ಶೇಖ್ ಕಲಫಾನ್ ಹುಸೇನ್, ಯುವರಾಜ್ ಇವರು ಗೋವಾದ ಪಣಜಿಯಲ್ಲಿ ಜರುಗಿದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಅಮೋಘ ಸಾಧನೆಗೈದು ಲಂಡನ್ ನಲ್ಲಿ ನಡೆಯಲಿರುವ ಮುಂದಿನ ಹಂತದ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡ ಇವರನ್ನು ಕಾಲೇಜಿನ ಆಡಳಿತ ಮಂಡಳಿ ವತಿಯಿಂದ, ಉಪನ್ಯಾಸಕರು, ವಿದ್ಯಾರ್ಥಿಗಳು ಗುರುವಾನಕೆರೆಯಿಂದ ಕಾಲೇಜು ವರೆಗೆ ಭವ್ಯ ಸ್ವಾಗತ ದೊಂದಿಗೆ ಬರ ಮಾಡಿಕೊಳ್ಳಲಾಯಿತು.

ಬಳಿಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅಭಿನಂದನಾ ಸಭೆ ಶ್ರೀ ಗುರುದೇವ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಮಾಜಿ ಶಾಸಕ ಕೆ. ವಸಂತ ಬಂಗೇರ ಗೌರವಿಸಿ ಶುಭ ಹಾರೈಸಿದರು. ಗುರದೇವ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ. ಸವಿತಾ, ಉಪ ಪ್ರಾಂಶುಪಾಲ ಶಮಿಯುಲ್ಲಾ, ಪ. ಪೂ. ಕಾಲೇಜು ಪ್ರಾಂಶುಪಾಲ ಸುಕೇಶ್ ಕುಮಾರ್ ,ಉಪನ್ಯಾಸಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಗುರುವಾಯನಕೆರೆಯಿಂದ ವಿದ್ಯಾರ್ಥಿಗಳನ್ನು ಭವ್ಯ ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಯಿತು

LEAVE A REPLY

Please enter your comment!
Please enter your name here