ಕೊಯ್ಯುರು ಯಕ್ಷಗಾನ ತಾಳಮದ್ದಳೆ ಪಂಚಾಹ ಸಮಾರೋಪ

0

ಕೊಯ್ಯರು :ಕೊಯ್ಯರು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಪಂಚದುರ್ಗಾ ಯಕ್ಷಗಾನ ಕಲಾ ಸಂಘದ ನೇತೃತ್ವದಲ್ಲಿ ಶ್ರೀ ಪಂಚದುರ್ಗಾ ಭಜನಾ ಮಂಡಳಿ ಕೊಯ್ಯರು ದೇವಸ್ಥಾನ ಇದರ ಸಹಯೋಗದಲ್ಲಿ ನ.9 ರಿಂದ 13 ರವರೆಗೆ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ನಡೆದ 3 ನೇ ವರ್ಷದ ಯಕ್ಷಗಾನ ತಾಳಮದ್ದಳೆ ಪಂಚಾಹ ಸಮಾರೋಪ ಸಮಾರಂಭ ಕೀರ್ತಿ ಶೇಷ ಪಾಂಬೇಲು ಶ್ರೀನಿವಾಸಯ್ಯ, ಪಿ. ರಾಮ ಭಟ್, ವಿಷ್ಣು ಭಟ್ ಇವರ ಸಂಸ್ಮರಣೆಯೊಂದಿಗೆ ನ. 13 ರಂದು ಕೊಯ್ಯೂರು ದೇವಸ್ಥಾನದಲ್ಲಿ ನಡೆಯಿತು.

ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ದೀಪ ಬೆಳಗಿಸಿ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ದೇವಸ್ಥಾನದ ಪ್ರಧಾನ ಅರ್ಚಕರು ಕೊಯ್ಯೂರು ಪ್ರಾ. ಕೃ. ಪ. ಸ. ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ್ ಕುಮಾರ್ ಭಾಂಗಿಣ್ಣಾಯ ವಹಿಸಿದ್ದರು.

ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತಸರ ಕೆ.ಬಿ.ಹರಿಶ್ಚಂದ್ರ ಬಳ್ಳಾಲ್, ತಂತ್ರಿಗಳಾದ ಕೊಯ್ಯೂರು ನಂದ ಕುಮಾರ್ ಗೇರುಕಟ್ಟೆ,ಪ್ರಗತಿಪರ ಕೃಷಿಕ ಪ್ರಚಂಡಭಾನು ಭಟ್,ಕೊಯ್ಯೂರು ಪ್ರಾ. ಕೃ. ಪ. ಸ. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಂತಕೃಷ್ಣ ಭಟ್, ಅಧ್ಯಕ್ಷ ನವೀನ್ ಗೌಡ, ನಡ ಸ. ಪ. ಪೂ. ಕಾಲೇಜು ಉಪನ್ಯಾಸಕ ಮೋಹನ ಗೌಡ, ಸುದ್ದಿ ಬಿಡುಗಡೆ ಪತ್ರಿಕೆಯ ಸಹಾಯಕ ವ್ಯವಸ್ಥಾಪಕ ಜಾರಪ್ಪ ಪೂಜಾರಿ ಬೆಳಾಲು ಉಪಸ್ಥಿತರಿದ್ದರು. ಉಪನ್ಯಾಸಕ ದಿವಾ ಕೊಕ್ಕಡ ಸ್ವಾಗತಿಸಿದರು. ಶಿಕ್ಷಕ ವಿಜಯ ಕುಮಾರ್ ಎಂ.ಸಂಸ್ಮರಣಾ ನುಡಿ ಸಲ್ಲಿಸಿದರು.ಚಂದ್ರಯ್ಯ ಆಚಾರ್ಯ ಅನಿಸಿಕೆ ವ್ಯಕ್ತ ಪಡಿಸಿದರು.

ಶಿಕ್ಷಕ ರಾಮಕೃಷ್ಣ ಭಟ್ ನಿನ್ನಿಕಲ್ ನಿರೂಪಿಸಿ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಉಮೇಶ್ ಆಚಾರ್ಯವಂದಿಸಿದರು. ಕಾರ್ಯಕ್ರಮದಲ್ಲಿ ಪ್ರತಾಪಸಿಂಹ ನಾಯಕ್, ನಂದ ಕುಮಾರ್ ತಂತ್ರಿ, ಪ್ರಚಂಡಬಾನು ಭಟ್ ಇವರನ್ನು ಗೌರವಿಸಲಾಯಿತು. ಸಂಘಟಕರು ಕಲಾಭಿಮಾನಿಗಳು, ಊರವರು ಉಪಸ್ಥಿತರಿದ್ದರು. ಬಳಿಕ ಗರುಡ ಗರ್ವ ಭಂಗ ಪ್ರಸಂಗ ತಾಳಮದ್ದಳೆ ನಡೆಯಿತು.

LEAVE A REPLY

Please enter your comment!
Please enter your name here