ಗುಂಡೂರಿ: ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆ; ರಕ್ತದಾನ ಅತ್ಯಂತ ಶ್ರೇಷ್ಠ ದಾನ: ಡಾ| ಶಾಂತಿಪ್ರಸಾದ್

0

ವೇಣೂರು: ಕಟ್ಟೆ ಸ್ಪೋರ್ಟ್ಸ್ ಕ್ಲಬ್ ಗುಂಡೂರಿ ಇದರ ವತಿಯಿಂದ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು, ಗ್ರಾ.ಪಂ. ಆರಂಬೋಡಿ, ಪ್ರಾ.ಕೃ.ಪ.ಸ. ಸಂಘ ವೇಣೂರು, ಹಾಲು ಉ.ಸ. ಸಂಘ ಗುಂಡೂರಿ ಹಾಗೂ ಸತ್ಯನಾರಾಯಣ ಪೂಜಾ ಭಜನ ಮಂಡಳಿಯ ಜಂಟಿ ಆಶ್ರಯದಲ್ಲಿ ಗುಂಡೂರಿ ಸತ್ಯನಾರಾಯಣ ಭಜನ ಮಂದಿರದಲ್ಲಿ ನ. 13ರಂದು  ಜರಗಿದ ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

“ರಕ್ತವನ್ನು ಕೃತಕವಾಗಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ರಕ್ತದಾನ ಮತ್ತೊಂದು ಜೀವವನ್ನು ಉಳಿಸುವ ಪುಣ್ಯದ ಕೆಲಸವಾಗಿದ್ದು, ರಕ್ತದಾನ ಅತ್ಯಂತ ಶ್ರೇಷ್ಠ ದಾನ” ಎಂದು ವೇಣೂರಿನ ಪ್ರಖ್ಯಾತ ವೈದ್ಯ ಡಾ| ಶಾಂತಿಪ್ರಸಾದ್ ಹೇಳಿದರು.

ಆರಂಬೋಡಿ ಗ್ರಾ.ಪಂ. ಅಧ್ಯಕ್ಷೆ ವಿಜಯಾ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಆರಂಬೋಡಿ ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್‌ಚಂದ್ರ ಜೈನ್, ಪಿಡಿಒ ಗಣೇಶ್ ಶೆಟ್ಟಿ, ಸತ್ಯನಾರಾಯಣ ಪೂಜಾ ಭಜನ ಮಂಡಳಿ ಅಧ್ಯಕ್ಷ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು, ವೇಣೂರು ಲಯನ್ಸ್ ಕ್ಲಬ್‌ನ ನವೀನ್ ಪೂಜಾರಿ ಪಚ್ಚೇರಿ, ಆರಂಬೋಡಿ ಗ್ರಾ.ಪಂ. ಸದಸ್ಯರಾದ ಗೀತಾ ವಿಶ್ವನಾಥ ಪೂಜಾರಿ, ತೇಜಸ್ವಿನಿ ಪ್ರವೀಣ್, ಕು| ದೀಕ್ಷಿತಾ ದೇವಾಡಿಗ ನಡುಕುಮೇರು, ಕೆಎಂಸಿಯ ವೈದ್ಯ ಡಾ| ವೆಂಕಟ್‌ನಾಗರಾಜ್, ಕಟ್ಟೆ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಂದೀಪ್ ಪೂಜಾರಿ ಪಾದೆಗುರಿ, ಸಂಚಾಲಕ ನಿತೀಶ್ ಗುಂಡೂರಿ ಮತ್ತಿತರರು ಉಪಸ್ಥಿತರಿದ್ದರು.

ಸುಧಾಕರ ಭಟ್ ಸ್ವಾಗತಿಸಿ, ದಯಾನಂದ ದೇವಾಡಿಗ ವಂದಿಸಿದರು. ಜಗನ್ನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಅತ್ಯಂತ ಮಿತದರದಲ್ಲಿ ಸೇವೆ ನೀಡುತ್ತಿರುವ ವೇಣೂರು ನಮನ ಕ್ಲಿನಿಕ್‌ನ ಪ್ರಸಿದ್ಧ ವೈದ್ಯ ಡಾ| ಶಾಂತಿಪ್ರಸಾದ್ ಅವರನ್ನು ಸಮ್ಮಾನಿಸಲಾಯಿತು.

LEAVE A REPLY

Please enter your comment!
Please enter your name here