ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಯಂಗ್ ಚಾಲೆಂಜರ್ಸ್ ಗೆ ಭೇಟಿ; ಕ್ರೀಡಾಂಗಣಕ್ಕೆ ಹೈಮಾಸ್ಟ್ ಲೈಟ್ ಕೊಡುಗೆ ಭರವಸೆ

0

ಬೆಳ್ತಂಗಡಿ: ಇತ್ತೀಚೆಗಷ್ಟೇ 33 ನೇ ವರ್ಷದ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿರುವ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘಕ್ಕೆ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ನ.13 ರಂದು ಭೇಟಿ ನೀಡಿದರು.‌

ಸಂಸ್ಥೆಯ ಆಗಿನ ಅಧ್ಯಕ್ಷ ಅಶ್ರಫ್ ಆಲಿಕುಂಞಿ, ಸಂಚಾಲಕ ನಾಮದೇವ ರಾವ್ ಅವರು ಈ ವೇಳೆ ಸಂಸ್ಥೆಯ ಗೌರವವನ್ನು ಎಂಎಲ್‌ಸಿ ಅವರಿಗೆ ಸಲ್ಲಿಸಿದರು.

ಈ ವೇಳೆ ಸಂಘದ ಮುಂಭಾಗದ ಗ್ರಾಮ ದೈವದ ದೊಂಪದ ಬಲಿ ನಡೆಯುವ ಹಾಗೂ ಕ್ರೀಡಾ ಸಂಘದ ಕ್ರೀಡಾ ತರಬೇತಿ ಮೈದಾನಕ್ಕೆ ಅನುವಾಗುವಂತೆ ಹೈಮಾಸ್ಟ್ ಲೈಟ್ ಶೀಘ್ರದಲ್ಲೇ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಈ ವೇಳೆ ಕ್ರೀಡಾ ಸಂಘದ ಅಧ್ಯಕ್ಷ ಶೀನಪ್ಪ ಗೌಡ, ನಿರ್ದೇಶಕ ಲಕ್ಷ್ಮಣ, ಸದಸ್ಯರಾದ ದಿನೇಶ್, ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಲೀಲಾವತಿ, ಆದರ್ಶ್ ಟೈಲರ್ ನಾರಾಯಣ ಶೆಟ್ಟಿ, ಗುರುಪ್ರಸಾದ್, ಆಶಾ, ಸುನೀತಾ ಅರುಣ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here