ಲಯನ್ಸ್ ಪ್ರಾಂತ್ಯ ಸಮ್ಮೇಳನದ‌ ಪ್ರಯುಕ್ತ ಬಂಗಾಡಿ‌ ಪ್ರೌಢ ಶಾಲೆಗೆ ಕಂಪ್ಯೂಟರ್, ಸ್ಮಾರ್ಟ್ ಕ್ಲಾಸ್ ಕೊಡುಗೆ

0

ಬೆಳ್ತಂಗಡಿ:  ತಂತ್ರಜ್ಞಾನದಲ್ಲಿ ಜಗತ್ತು ಮುಂದುವರಿಯುತ್ತಿರುವುದರಿಂದ ಗ್ರಾಮೀಣ ಭಾಗದ ಸರಕಾರಿ‌ ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡುವ ಕಾರ್ಯವನ್ನು ಜಿಲ್ಲಾ ಲಯನ್ಸ್ ಸಂಸ್ಥೆ ಕೈಗೆತ್ತಿಕೊಂಡಿದೆ. ಇದರಲ್ಲಿ ಲಯನ್ಸ್ ಜಿಲ್ಲೆಯ ಎಲ್ಲಾ 4500 ಸದಸ್ಯರು ಭಾಗಿಯಾಗಲಿದ್ದಾರೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ ಹೇಳಿದರು.

ಲಯನ್ಸ್ ಪ್ರಾಂತ್ಯಾಧ್ಯಕ್ಷ, ಶ್ರದ್ದಾ ಎಂಟರ್ ಪ್ರೈಸಸ್ ಮಾಲಿಕ ವಸಂತ ಶೆಟ್ಟಿ ಅವರ ಪ್ರಾಂತ್ಯಾ ಸಮ್ಮೇಳನದ ಸವಿನೆನಪಿಗಾಗಿ ಬಂಗಾಡಿ ಸರಕಾರಿ ಪ್ರೌಢ ಶಾಲೆಗೆ ಕೊಡುಗೆ ನೀಡಿದ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಮತ್ತು ಪ್ರಿಂಟರ್ ಇದರ ಉದ್ಘಾಟನೆ ಕಾರ್ಯಕ್ರಮ ನ.14 ರಂದು ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಲಯನ್ಸ್ ಇಂದು 220 ದೇಶಗಳಲ್ಲಿದೆ. 15 ಲಕ್ಷಕ್ಕೂ ಅಧಿಕ ಸದಸ್ಯರು ಸೇರಿ ಸೇವೆಯೊಂದೇ ಉದ್ದೇಶದಿಂದ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ ವಹಿಸಿದ್ದರು.

ವೇದಿಕೆಯಲ್ಲಿ ಲಯನ್ಸ್ ಪ್ರಾಂತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ ಬೆಂಗೆತ್ಯಾರು, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಕಾರ್ಯಾಧ್ಯಕ್ಷ ಹೇಮಂತ ರಾವ್ ಯರ್ಡೂರು, ಹಿರಿಯ ಲಯನ್ ಸುರೇಂದ್ರ ಕುಮಾರ್, ವಲಯಾಧ್ಯಕ್ಷ ಜೇಮ್ಸ್ ಮೆಂಡ, ಮುಚ್ಚೂರು ನೀರುಡೆ ಘಟಕದ ಅಧ್ಯಕ್ಷ ಸ್ಟೇನಿ ಮಿರಾಂದ, ಗುರುಪುರ ಕೈಕಂಬ ಘಟಕದ ಅಧ್ಯಕ್ಷ ಮೆಲ್ವಿನ್ ಸಲ್ಡಾನಾ, ಜಿಲ್ಲಾ ಸಂಪುಟ ಗ್ಲೋಬಲ್ ಸರ್ವಿಸ್ ಕೋರ್ಡಿನೇಟರ್ ಓಸ್ವಾಲ್ಡ್ ಡಿಸೋಜಾ, ಎಸ್‌ಡಿಎಂಸಿ ಉಪಾಧ್ಯಕ್ಷ ವಿಶ್ವನಾಥ ಗೌಡ,‌ ಮಾಜಿ ಅಧ್ಯಕ್ಷ ಲಕ್ಷ್ಮಣ‌ ಗೌಡ ಬಂಗಾಡಿ, ತಾ.ಪಂ ಮಾಜಿ ಅಧ್ಯಕ್ಷ ಮುಕುಂದ ಸುವರ್ಣ, ರಾಜ್ಯ ಮಟ್ಟದ ಶಿಕ್ಷಕ‌ ಪ್ರಶಸ್ತಿ ಪುರಸ್ಕೃತ ಅಮಿತಾನಂದ ಹೆಗ್ಡೆ ಬಂಗಾಡಿ, ಲಯನ್ಸ್ ಕ್ಲಬ್ ಬೆಳ್ತಂಗಡಿ ಕಾರ್ಯದರ್ಶಿ ತುಕಾರಾಮ ಬಿ,‌ ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ನ‌ ರಾಮಕೃಷ್ಣ ಗೌಡ, ರಘುರಾಮ ಶೆಟ್ಟಿ, ಅಶ್ರಫ್ ಆಲಿಕುಂಞಿ ಮುಂಡಾಜೆ, ಮೇದಿನಿ‌ ಡಿ‌ ಗೌಡ, ಸುಭಾಷಿಣಿ, ಧತ್ತಾತ್ರೇಯ ಜಿ, ಜೆಫ್ರಿಯನ್ ತಾವ್ರೂ, ರೋಶನ್ ಡಿಸೋಜಾ, ಜಯಂತ ಶೆಟ್ಟಿ ಕುಂಟಿನಿ ಮೊದಲಾದವರು ಭಾಗವಹಿಸಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ಚಂದ್ರಕಲಾ ಪ್ರಸ್ತಾವನೆಗೈದರು. ಶಿಕ್ಷಕಿ ಲವೀನಾ ಸ್ವಾಗತಿಸಿದರು. ಶಿಕ್ಷಕಿ ವಸಂತಿ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಕವಿತಾ ಸನ್ಮಾನ ನಿರ್ವಹಿಸಿದರು.‌ ಶಿಕ್ಷಕಿ ವಿಲ್ಮಾ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಲಯನ್ಸ್ ರಾಜ್ಯಪಾಲ ಸಂಜೀತ್ ಶೆಟ್ಟಿ, ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ, ಮೇಲ್ಛಾವಣಿಯ ಮರದ ಕೆಲಸ ನಿರ್ವಹಿಸಿದ ನಾರಾಯಣ ಆಚಾರಿ ಅವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here