ಬೆಳ್ತಂಗಡಿ ಸ. ಪ. ಪೂ. ಕಾಲೇಜಿನಲ್ಲಿ ರೆಡ್ ಕ್ರಾಸ್ ಘಟಕ ಉದ್ಘಾಟನೆ

0

ಬೆಳ್ತಂಗಡಿ : ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಜೂನಿಯರ್ ರೆಡ್ ಕ್ರಾಸ್ ಘಟಕವನ್ನು ಅಧಿಕೃತವಾಗಿ ನ.15 ಉದ್ಘಾಟಿಸಲಾಯಿತು.

ಬೆಳ್ತಂಗಡಿ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ಆಗಮಿಸಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಸುಕುಮಾರ್ ಜೈನ್ ವಹಿಸಿದ್ದರು. ಸಂಪೂರ್ಣ ಮೂಲ ವ್ಯಕ್ತಿಗಳಾಗಿ ಬೆಳತಂಗಡಿ ತಾಲೂಕು ರೆಡ್ ಕ್ರಾಸ್ ಘಟಕದ ಉಪಾಧ್ಯಕ್ಷ ಅರವಿನ್ ಡಿಸೋಜಾ ಆಗಮಿಸಿ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರು ಸಾತ ನ್ಯಾಯವಾದಿ ಬಿ.ಕೆ.ಧನಂಜಯ್ ರಾವ್ ಸುವರ್ಣ ಮಹೋತ್ಸವ ಸಮಿತಿ ಉಪಾಧ್ಯಕ್ಷ ರೊನಾಲ್ಡ್ ಲೋಬೊ ಸದಸ್ಯರುಗಳಾದ ಪ್ರಮೋದ ನಾಯಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕ ಮೋಹನ್ ಭಟ್ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ಮಾತನಾಡಿದರು. ಕುಮಾರಿ ಗೌರವಿ ಮತ್ತು ತಂಡದವರು ಪ್ರಾರ್ಥನೆಗೈದರು ಉಪನ್ಯಾಸಕರಾದ ಆನಂದ ವಂದನಾರ್ಪಣೆಗೈದರು ವಿದ್ಯಾರ್ಥಿಗಳು ರೆಡ್ ಕ್ರಾಸ್ ಸದಸ್ಯತ್ವ ಪಡೆದರು.

LEAVE A REPLY

Please enter your comment!
Please enter your name here