ಗುರುವಾಯನಕೆರೆ: 33ಕೆ ವಿ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಅವಘಡ

0

ಗುರುವಾಯನಕೆರೆ : ಇಲ್ಲಿಯ ಕುವೆಟ್ಟು ಗ್ರಾಮದ ಕೊಂಟುಪಲಿಕೆ ಕೆನರಾ ಬ್ಯಾಂಕ್ ಎದುರು 33ಕೆ. ವಿ. ವಿದ್ಯುತ್ ತಂತಿ ಹಾದು ಹೋಗುತ್ತದೆ. ಇಲ್ಲಿ ಅನೇಕ ಕಟ್ಟಡ ತಲೆ ಎತ್ತಿ ನಿಂತಿದ್ದು, ನೇರವಾಗಿ ಹಾದು ಹೋಗುವ ತಂತಿ ಮತ್ತು ಕಂಬಗಳನ್ನು ಎಲ್ ಶೇಪ್ ನಲ್ಲಿ ಅಳವಡಿಸಲಾಗಿದೆ.

33ಕೆ. ವಿ ಕಂಬ ದಲ್ಲಿ  ನ. 17ರಂದು ರಾತ್ರಿ 8ಗಂಟೆಗೆ ಜೋರಾದ ಶಬ್ದ ದೊಂದಿಗೆ ವಿದ್ಯುತ್ ಅವಘಡವಾಗಿದ್ದು. ನೂರಾರು ಜನ ಸ್ಥಳಕ್ಕೆ  ಧಾವಿಸಿದ್ದಾರೆ.  ಬೆಳಿಗ್ಗೆ ಮರದ ರೆಂಬೆಗಳನ್ನು ಕಡಿಯಲು ಬಿ.ಸಿ.ರೋಡ್ ನಿಂದ ಆಗಮಿಸಿದ್ದರು.ಇಲ್ಲಿ ಪಾಂಡೇಶ್ವರದಲ್ಲಿ  ಜನನಿಬಿಡ   ಪ್ರದೇಶವಾದ್ದರಿಂದ ರಿಂದ ಅಪಘಾತಕ್ಕೆ ಕರೆ ಕೊಟ್ಟಂತಾಗಿದೆ. ಶಬ್ದಕ್ಕೆ ಬಾರಿ ಸಂಖ್ಯೆ ಯಲ್ಲಿ ಜನ ಜಮಾಹಿಸಿದ್ದು ಅಪಘಾತಕ್ಕೆ ಕಳಪೆ ಕಾಮಗಾರಿ ಕಾರಣ ಎಂದು ಸಾರ್ವಜನಿಕರು ಮಾತಾಡಿಕೊಂಡಿದ್ದಾರೆ. ಇತ್ತ ಕಡೆ ಅಧಿಕಾರಿಗಳು ಗಮನ ಹರಿಸಿ ಸರಿ ಪಡಿಸುವಂತೆ ಸಾರ್ವಜನಿಕರು ಕೋರಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here