ನೆರಿಯ: ಸಹಕಾರಿ ಸಪ್ತಾಹ ಕಾರ್ಯಕ್ರಮ

0

ಮುಂಡಾಜೆ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 69ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಐದನೇ ದಿನ ಕಾರ್ಯಕ್ರಮ ಅಣಿಯೂರು ಕಮಲಾಕ್ಷ ಗೌಡರ ತೋಟದಲ್ಲಿ ನ.18 ರಂದು ನಡೆಯಿತು.

ಕೃಷಿ ಮಾಹಿತಿ ಹಾಗೂ ವಿಶೇಷ ಉಪನ್ಯಾಸನವನ್ನು ಖ್ಯಾತ ಸಾವಯವ ಕೃಷಿ ತಜ್ಞರು ಮೈಕ್ರೋ ಬಿ ಫೌಂಡೇಶನ್ ಶ್ರೀಕಾಂತ್  ನೀಡಿದರು.  ಅಧ್ಯಕ್ಷತೆಯನ್ನು ಮುಂಡಾಜೆ ಫ್ಯಾಕ್ಸ್ ನಿರ್ದೇಶಕ ಸಂಜೀವ ಗೌಡ ಮಾಕಳ ವಹಿಸಿದ್ದರು. ಫ್ಯಾಕ್ಸ್ ಅಧ್ಯಕ್ಷ ನೂಜಿ ಜನಾರ್ದನ ಗೌಡ, ಪ್ರೇರಣಾ ಸಹಕಾರಿ ಸಂಘದ ಅಧ್ಯಕ್ಷ ಲ್ಯಾನ್ಸಿ ಪಿರೇರಾ ನಿವೃತ್ತ ಸಿಇಓ ನಾರಾಯಣ ಫಡ್ಕೆ ನೆರಿಯ ಗ್ರಾಮ ಪಂಚಾಯತ್ ಸದಸ್ಯ ಹೂವಯ್ಯ ಗೌಡ , ನೆರಿಯಾ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷ ರಾಮ್ ಕುಮಾರ್ ಬೋವಿನಡಿ, ನೆರಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪಿಕೆ ,ಮುಂಡಾಜೆ ಫ್ಯಾಕ್ಸ್ ನಿರ್ದೇಶಕ ನಂದ ಕುಮಾರ್ ಎ ಹಾಗೂ ಕೊರಗಪ್ಪ ನಾಯ್ಕ್, ಸಹಕಾರಿ ಸಂಘದ ಸಿಬ್ಬಂದಿಗಳು ಉಪಸ್ಧಿತರಿದ್ದರು.

ಮುಂಡಾಜೆ ಸಿಇಓ ಚಂದ್ರಕಾಂತ್ ಸ್ವಾಗತಿಸಿ, ನೆರಿಯ ಕಾರ್ಯನಿರ್ವಾಹಕ ಸದಾನಂದ ವಂದಿಸಿದರು. ಪ್ಯಾಕ್ಸ್ ನಿರ್ದೇಶಕ ಕೊರಗಪ್ಪ ನಾಯ್ಕ್ ನಿರೂಪಿಸಿದರು.

LEAVE A REPLY

Please enter your comment!
Please enter your name here