ಶಿಶಿಲ ಪಂಚಾಯತ್ ವ್ಯಾಪ್ತಿಯಲ್ಲಿ ಸುದ್ದಿ ಕೃಷಿ ಕೇಂದ್ರ ಮಾಹಿತಿ ಕಾರ್ಯಾಗಾರ

0


ಶಿಶಿಲ : ಶಿಶಿಲ ಪಂಚಾಯತ್ ವ್ಯಾಪ್ತಿಯಲ್ಲಿ ಸುದ್ದಿ ಕೃಷಿ ಕೇಂದ್ರ ಮಾಹಿತಿ ಕೇಂದ್ರದ ವತಿಯಿಂದ ಸುದ್ದಿ ಕೃಷಿ ಮಾಹಿತಿ ಕಾರ್ಯಾಗಾರ “ಕೃಷಿ ಖುಷಿ” ನ.18 ರಂದು ಶಿಶಿಲ ಪಂಚಾಯತು ಸಭಾಂಗಣದಲ್ಲಿ ನಡೆಯಿತು.

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತನಿರ್ದೇಶಕರು ಸಂಪಾದಕ ಡಾ. ಯು. ಪಿ. ಶಿವಾನಂದ, ಸುದ್ದಿ ಕೃಷಿ ಮಾಹಿತಿಯ ಮುಖ್ಯಸ್ಥ ಗಣೇಶ್ ಕಲ್ಲರ್ಪೆ, ಸುದ್ದಿ ಪತ್ರಿಕೆ ಬೆಳ್ತಂಗಡಿ ಸಿಇಒ ಸಿಂಚನ ಊರು ಬೈಲು,ಸುದ್ದಿ ಪ್ರತಿ ನಿಧಿ ಜಿಲ್ಲಾ ಮುಖ್ಯಸ್ಥ ರಾಜೇಶ್ ಎಮ್.ಎಸ್,  ಗ್ರಾ. ಪಂ. ಸದಸ್ಯ ಸುಧೀನ್, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕ ಕೊರಗಪ್ಪ ಗೌಡ ಇನ್ನಿತರ ಸಂಘ ಸಂಸ್ಥೆ ಗಳ ಸದಸ್ಯರು,ಊರವರು ಉಪಸ್ಥಿತರಿದ್ದು,ಕೃಷಿಕರು ತಮ್ಮ ಅನುಭವ ಹಂಚಿ ಕೊಳ್ಳುವ ಮೂಲಕ ಸುದ್ದಿ ಕೃಷಿ ಮಾಹಿತಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಲಂಚ ಭ್ರಷ್ಟಾಚಾರಕ್ಕೆ ಭಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ ಘೋಷಣೆಯೊಂದಿಗೆ ಪ್ರತಿಜ್ಞೆಯನ್ನು ಮಾಡಲಾಯಿತು.

ಬೆಳ್ತಂಗಡಿ ಸುದ್ದಿಪತ್ರಿಕೆ ವರದಿಗಾರರಾದ ತಿಮ್ಮಪ್ಪ ಗೌಡ ಸ್ವಾಗತಿಸಿದರು ತುಕಾರಾಮ ಪ್ರಸ್ತಾವಿಕ ಮಾತನಾಡುತ್ತಾ ಕಾರ್ಯಕ್ರಮ ನಿರ್ವಹಿಸಿದರು. ಬೆಳ್ತಂಗಡಿ ಸುದ್ದಿ ಪ್ರತಿನಿಧಿ ಮುಖ್ಯಸ್ಥ ಕೆ.ಎನ್.ಗೌಡ ಸುದ್ದಿ ಕೃಷಿ ಮಾಹಿತಿ ನೀಡಿ, ಧನ್ಯವಾದವಿತ್ತರು. ವರದಿಗಾರ ಅಭಿಷೇಕ್, ಕೃಷಿ ವಿಭಾಗದ ದೀಪ್ತಿ,   ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.  ಸುದ್ದಿ ಪ್ರತಿನಿಧಿ ಕರುಣಾಕರ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಲಕ್ಷ್ಮೀಶ, ಮೀನಾಕ್ಷಿ,  ಸ್ವಾತಿ ಸೂರಜ್  ಚನ್ನಪ್ಪ ಕೊಳಂಬೆ, ನರಸಿಂಹ ಗೌಡ, ವಿಶ್ವನಾಥ, ಕೊರಗಪ್ಪ ಗೌಡ, ಬಾಲಕೃಷ್ಣ ಕೆ.,ಸಂಜಯ್,    ಕರುಣಾಕರ ಶಿಶಿಲಾ, ತಾರಾ, ಅಕ್ಷತಾ, ಶಾರದಾ, ರಮೇಶ್  ಭಾಗಿಯಾಗಿದ್ದರು. ಕೋಳಿ ಸಾಕಾನೆ ಮಾಡುತ್ತಿರುವ  ರಮೇಶ್, ಎಣ್ಣೆ ಗಿರಣಿ ತಯಾರಿಸುವ ಗಂಗಾಧರ ದಾಮ್ಲೆ, ಹಾಳೆ ತಟ್ಟೆ, ಸೇಮಿಗೆ, ಇಡ್ಲಿ ತಯಾರಿಕೆ ನಾಟಿ ವೈದ್ಯ ಉಮೇಶ್, ರೊಟ್ಟಿ ತಯಾರಿಸುವ  ಮಾಧವ ಪೂಜಾರಿ, ಕತ್ತಿ ತಯಾರಿಸುವ ದಾಮೋದರ ಪೂಜಾರಿ, ಬತ್ತಿ ತಯಾರಿಸುವ  ಸ್ವಾತಿ ಸೂರಜ್, ಎಂಬ್ರಾಡ್ರಿ ವರ್ಕ್ – ಸುಮಾ ಸಂಜಯ್
ತನ್ನ ಕೆಲಸ ಕಾರ್ಯದ ಬಗ್ಗೆ ಅನುಭವವನ್ನು ಹಂಚಿಕೊಂಡರು.

LEAVE A REPLY

Please enter your comment!
Please enter your name here