ಬಂಗಾಡಿ: ಶಿಕ್ಷಕ ಅಮಿತಾ ನಂದ ಹೆಗ್ಡೆಯವರಿಗೆ ಸಾರ್ವಜನಿಕರಿಂದ ಸನ್ಮಾನ ಸಮಾರಂಭ

0

ಬಂಗಾಡಿ : ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅಮಿತಾನಂದ ಹೆಗಡೆಯವರಿಗೆ ಶಾಲಾಭಿವೃದ್ಧಿ ಸಮಿತಿ ಹಳೆ ವಿದ್ಯಾರ್ಥಿ ಸಂಘ ವಿದ್ಯಾಭಿಮಾನಿಗಳು ಹಾಗೂ ಊರವರ ವತಿಯಿಂದ ಸನ್ಮಾನ ಸಮಾರಂಭ ನ:20 ರಂದು ಬಂಗಾಡಿ ಶಾಲಾ ಆವರಣದಲ್ಲಿ ನೆರವೇರಿತು.

ಇಂದ ಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಅಡೀಲು ಇವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತನ್ನ ಅನಿಸಿಕೆ ವ್ಯಕ್ತಪಡಿಸಿದ ಶಾಸಕರು ಶಿಕ್ಷಣ ಎನ್ನುವುದು ಕೇವಲ ವೇತನ ಪಡೆಯುವ ಉದ್ಯೋಗವಲ್ಲ ಅದು ಒಬ್ಬ ವ್ಯಕ್ತಿ ಸಮಾಜಕ್ಕೆ ಎಷ್ಟು ಮುಖ್ಯ ಎನ್ನುವುದಕ್ಕೆ ಡಾ| ಅಂಬೇಡ್ಕರ್ ಉತ್ತಮ ನಿದರ್ಶನ. ಶೈಕ್ಷಣಿಕ ಕ್ಷೇತ್ರದಲ್ಲಿ ಇರುವ ಸಮಸ್ಯೆಯ ಬಗ್ಗೆ ಅರಿವು ನನಗಿದೆ. ಸರಕಾರಿ ಕಾಲೇಜನ್ನು ಖಾಸಗಿ ಶಾಲೆಗಳಿಗೆ ಸರಿ ಸಮಾನವಾಗಿ ಬೆಳೆಸುವುದೇ ನನ್ನ ಗುರಿ .ಒಬ್ಬ ಶಿಕ್ಷಕ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರದೆ ಇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ರಾಜ್ಯ ಪ್ರಶಸ್ತಿ ಪಡೆದಿರುವ ಅಮಿತಾ ಆನಂದ ಹೆಗಡೆಯವರಿಗೆ ರಾಷ್ಟ್ರಪ್ರಶಸ್ತಿ ದೊರೆಯಲಿ ಎಂದು ಶುಭ ಹಾರೈಸಿದರು ಅದಲ್ಲದೆ ಈ ಶಾಲೆಗೆ ರೂ 10 ಲಕ್ಷ ಕೊಡಿಸುವುದಾಗಿ ಭರವಸೆ ನೀಡಿದರು.

ಈ ವೇಳೆ  ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್,  ಬಂಗಾಡಿಯ ಅರಮನೆಯ ಯಶೋಧರ ಬಳ್ಳಾಲ್ , ತಾಲೂಕು ಪಂಚಾಯತ್ ಬೆಳ್ತಂಗಡಿ ಮಾಜಿ ಅಧ್ಯಕ್ಷರು  ಮುಕುಂದ ಸುವರ್ಣ,  ಕ, ರಾ, ಪ್ರಾ, ಶಾ ಶಿಕ್ಷಕರ ಸಂಘ ಬೆಳ್ತಂಗಡಿ ಘಟಕ ಅಧ್ಯಕ್ಷರು  ಕಿಶೋರ್ ಕುಮಾರ್ , ಮಹೇಶ್ ಎ ಸಹ ಶಿಕ್ಷಕರು ಪೆರ್ಲ ಬೈಪಾಡಿ, ರಮಾನಂದ ಬಿ ವಿಶ್ವನಾಥ ಗೌಡ,  ಪ್ರೇಮ ಬಿ ಜೈನ್ ತಾರಕೇಶ್ವರಿ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ್,  ಸತೀಶ್ , ಹರಿಣಾಕ್ಷಿ,  ವೀರಪ್ಪ, ಮೊಯಿಲಿ, ಸತೀಶ್ ಹಾಗೂ ಡಾ| ಪ್ರದೀಪ್ ನಾವೂರು,  ರೆ.ಫಾ. ಜೋಜ್ ಪಿ, ಡಿ ಅಂಟಿನಿ ಸುಭಾಷ್ ಜಾದವ್ ,ರಾಮಕೃಷ್ಣ ಗೌಡ, ಲಯನ್ ಕೃಷ್ಣಾಚಾರ್ ,ವಿಮಲ್ ನೆಲ್ಯಾಡಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಶ್ ,ಜಿಲ್ಲಾ ಘಟಕದ ಕೋಶಾಧಿಕಾರಿ ರಮೇಶ್ ಮಯ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ  ಪ್ರತಿಭಾವಂತ ವಿನೋದ್ ಚಾರ್ಮಾಡಿ ಇವರ ಬಳಗದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ಕಿಶೋರ್ ಕುಮಾರ್ ಸ್ವಾಗತಿಸಿದ ಈ ಕಾರ್ಯಕ್ರಮವನ್ನು ಸುಭಾಷ್ ಜಾದವ್ ವಂದಿಸಿದರು. ರಮೇಶ್ ಫೈಲಾರ್ ಹಾಗೂ ಅನುಪಮಾ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here