ಕಲ್ಮಂಜ: ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ

0

ಕಲ್ಮಂಜ: ಗ್ರಾಮ ಪಂಚಾಯತ್ ಕಲ್ಮಂಜ ಇದರ ವತಿಯಿಂದ , ಕಲ್ಬೆಟ್ಟು ಎಂಟರ್ ಪ್ರೈಸಸ್ ಗ್ರಾಮವನ್ ಮುಂಡಾಜೆ, ಜೇಸಿಐ ಮಂಜುಶ್ರೀ ಬೆಳ್ತಂಗಡಿ, ಭಾರತೀಯ ಮಜ್ದೂರ್ ಸಂಘ ಗ್ರಾಮ ಸಮಿತಿ-ಕಲ್ಮಂಜ ಇವರ ಸಹಯೋಗದಲ್ಲಿ ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ ನ.18ರಂದು ಗ್ರಾಮ ಪಂಚಾಯತ್ ಸಭಾಭವನ ಕಲ್ಮಂಜದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ ಶ್ರೀಧರ್ ಕಲ್ಮಂಜ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಜೆಎಫ್ ಎಂ ಪ್ರಸಾದ್ ಬಿಸಿ ಅಧ್ಯಕ್ಷರು ಜೆಸಿಐ ಬೆಳ್ತಂಗಡಿ, ದೀಕ್ಷಿತ್ ಕಲ್ಬೆಟ್ಟು ಎಂಟರ್ ಪ್ರೈಸಸ್ ಗ್ರಾಮವನ್ ಮುಂಡಾಜೆ, ಪ್ರವೀಣ್ ಗೌಡ ಗ್ರಾಮ ಪಂಚಾಯತ್ ಸದಸ್ಯರ ಭಾರತೀಯ ಮಜ್ದೂರ್ ಸಂಘ ಕಲ್ಮಂಜ, ಸಾಂತಪ್ಪ ಕಲ್ಮಂಜ ಯುವ ಸಬಲೀಕರಣ ಮೇಲ್ವಿಚಾರಕರು ಬೆಳ್ತಂಗಡಿ, ಕುಮಾರ್ ನಾಥ ಕಲ್ಮಂಜ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭಾರತೀಯ ಮಜ್ದೂರ್ ಸಂಘ ಇವರು ಭಾಗವಹಿಸಿದ್ದರು.

ಕಲ್ಮಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here