ಗುರುವಾಯನಕೆರೆಯಲ್ಲಿ ವೈಭವ್ ಏಜನ್ಸೀಸ್ ಸಿರಾಮಿಕ್ ಗ್ಯಾಲರಿ ಉದ್ಘಾಟನೆ

0


ಗುರುವಾಯನಕೆರೆ : ಗುರುವಾಯನಕೆರೆ ಶಕ್ತಿ ನಗರದಲ್ಲಿ ಎಸ್ ಕೆ ವೈಭವ್ ರವರ ನೂತನ ಸಂಸ್ಥೆ  ಸಿರಾಮಿಕ್ ಗ್ಯಾಲರಿ  ವೈಭವ್ ಏಜನ್ಸೀಸ್ ನ.25 ರಂದು ಉದ್ಘಾಟನೆ ಗೊಂಡಿತು. ಶಾಸಕ ಹರೀಶ್ ಪೂಂಜಾ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ,   ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡ0ಬು, ಅಭಿಯಂತರರ ತಾಲೂಕು ಸಂಘದ ಅಧ್ಯಕ್ಷ ಜಗದೀಶ್ ಪ್ರಸಾದ್ ಎನ್., ಉದಯ ಮಂಜಿತ್ತಾಯ ಡೆಂಜೋಳಿ,ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ, ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಜಯರಾಮ ಶೆಟ್ಟಿ ಪಡಂಗಡಿ, ಮುಂಡಾಲು ಗುತ್ತು ಜಯರಾಮ ಶೆಟ್ಟಿ,  ಲೀಲಾ ಬಾಬು ಶೆಟ್ಟಿ,  ರಾಜೇಶ್ ಶೆಟ್ಟಿ,ಇನ್ನಿತರ ಗಣ್ಯರು,ಗ್ರಾಹಕರು,ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.

ಪಾಲುದಾರರಾದ ಸೀತಾರಾಮ ಶೆಟ್ಟಿ ಪೆರುವಾರು, ಸಂತೋಷ್ ಶೆಟ್ಟಿ ಹಳ್ಳ0ದೋಡಿ, ತುಕಾರಾಮ್ ಸಪಲ್ಯ ಎಲ್ಬೇಲು,  ಸುಷ್ಮಾ ಸೀತಾರಾಮ ಶೆಟ್ಟಿ, ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು. ಎಂಜಿನಿಯರ್ ಅನಿಶ್ ಜೈನ್ ರವರನ್ನು ಸನ್ಮಾನಿಸಿದರು. ಶಿಕ್ಷಕ ಧರಣೆ0ದ್ರ ಕುಮಾರ್ ನಿರೂಪಿಸಿದರು.

LEAVE A REPLY

Please enter your comment!
Please enter your name here