ಪುತ್ತೂರು: ಲಯನ್ಸ್ ಕ್ಲಬ್‌ನ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಉದ್ಘಾಟನೆಗೊಂಡು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನ. 24ರಂದು ಪೆರುವಾಜೆಯ ಜೆ.ಡಿ. ಆಡಿಟೋರಿಯಂನಲ್ಲಿ ನಡೆಯಿತು.
ಕ್ಲಬ್‌ನ ನೂತನ ಅಧ್ಯಕ್ಷರಾಗಿ ಪಿ. ವಿಠಲ ಶೆಟ್ಟಿ ಪೆರ್ವಾಜೆ, ಸೆಕ್ರೆಟರಿಯಾಗಿ ದಯಾನಂದ ನಾಯ್ಕ್ ಮಠತಡ್ಕ, ಕೋಶಾಧಿಕಾರಿಯಾಗಿ ಪದ್ಮನಾಭ ಶೆಟ್ಟಿ ಪೆರ್ವಾಜೆ ಸೇರಿದಂತೆ ಸುಮಾರು 25 ಸದಸ್ಯರು ಸೇರ್ಪಡೆಗೊಂಡು ಪ್ರಮಾಣವಚನ ಸ್ವೀಕರಿಸಿದರು.
ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ, ಮಲ್ಟಿಪಲ್ ಕೌನ್ಸಿಲ್ ಚಯರ್ ಪರ್ಸನ್ ವಸಂತ ಕುಮಾರ್ ಶೆಟ್ಟಿ, ಪೂರ್ವ ಜಿಲ್ಲಾ ಗವರ್ನರ್ ಎಂ.ಬಿ. ಸದಾಶಿವ, ಜಿಲ್ಲಾ ಪ್ರಥಮ ಉಪರಾಜ್ಯಪಾಲರಾದ ಡಾ. ಮೆಲ್ವಿನ್ ಡಿಸೋಜ, ಜಿಇಟಿ ಕೋಆರ್ಡಿನೇಟರ್ ಶಶಿಧರ್ ಮಾರ್ಲ, ಜಿಎಲ್ಟಿ ಕೋಆರ್ಡಿನೇಟರ್ ಕುಡ್ಪಿ ಅರವಿಂದ ಶೆಣೈ, ಜಿಎಂಟಿ ಕೋಆರ್ಡಿನೇಟರ್ ಪ್ರಶಾಂತ್ ಶೆಟ್ಟಿ, ಜಿಎಸ್ಟಿ ಕೋಆರ್ಡಿನೇಟರ್ ಓಸ್ವಾಲ್ಡ್ ಡಿಸೋಜ, ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್, ಎಕ್ಸ್ ಟೆನ್ಷನ್ ಚಯರ್ ಮೆನ್ ಗಳಾದ ಆನಂದ ರೈ ದೇವಿನಗರ ಮತ್ತು ಕೃಷ್ಣ ಪ್ರಶಾಂತ್, ಎಕ್ಸ್ ಟೆನ್ಷನ್ ಕ್ಲಬ್ ನ ಪ್ರೆಸಿಡೆಂಟ್ ಕೇಶವ ನಾಯ್ಕ್, ಸೆಕ್ರೆಟರಿ ಗಣೇಶ್ ಶೆಟ್ಟಿ ಕೆ, ಟ್ರೆಸರರ್ ಗಣೇಶ್ ಶೆಟ್ಟಿ ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ತನ್ವಿ ಅರ್ನಾಡಿ ಭರತನಾಟ್ಯದ ಮೂಲಕ ಸ್ವಾಗತ ನೃತ್ಯ ಮಾಡಿದರು, ಪುತ್ತೂರು ಕ್ಲಬ್ ಸದಸ್ಯರಾದ ಟಿ. ಸದಾನಂದ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಹರೇಕೃಷ್ಣ, ಜಯಶ್ರೀ ಶೆಟ್ಟಿ, ಸುದರ್ಶನ ಪಡಿಯಾರ್, ಗಣೇಶ್ ಶೆಟ್ಟಿ ಪಿ, ಸುಮಂಗಳಾ ಶೆಣೈ, ಜಯಶ್ರೀ ನಾಯ್ಕ್, ಶಾರದಾ ಕೇಶವ್, ರೋಹಿಣಿ ಆಚಾರ್ಯ ಅತಿಥಿಗಳ ಹಾಗೂ ನೂತನ ಸದಸ್ಯರನ್ನು ಪರಿಚಯಿಸಿದರು.
ನೂತನ ಪದಗ್ರಹಣಗೊಂಡ ಕ್ಲಬ್‌ನ ವತಿಯಿಂದ ಸೇವಾ ಕಾರ್ಯವಾಗಿ ಬೆಳ್ಳಾರೆ ಸಂಚಾರಿ ವ್ಯಾಪಿಗೆ ರಸ್ತೆ ಸುರಕ್ಷಾ ಬೇರಿಕೇಡ್ ಕೊಡುಗೆ ನೀಡಲಾಯಿತು. 95 ವರ್ಷ ಪ್ರಾಯದ ಕಂಜೋಳಿ ಕುಂಡಡ್ಕರಿಗೆ ಆರ್ಥಿಕ ಧನ ಸಹಾಯ ಮತ್ತು ಉದಯೋನ್ಮುಖ ಪ್ರತಿಭೆ ಅವನಿ ಕೋಡಿಬೈಲು ಹಾಗೂ ಹತ್ತನೇ ತರಗತಿಯಲ್ಲಿ 623 ಅಂಕಗಳನ್ನು ಪಡೆದ ಚಂದನಲಕ್ಷ್ಮಿ ಪಿ. ಎನ್ ಬಾಲ ಪ್ರತಿಭೆಗಳನ್ನುಸನ್ಮಾನಿಸಲಾಯಿತು. ಅಧ್ಯಕ್ಷ ಕೇಶವ ನಾಯ್ಕ್ ಸ್ವಾಗತಿಸಿ, ಆನಂದ ರೈ ದೇವಿನಗರ ಪ್ರಾಸ್ತಾವಿಕ ಭಾಷಣ ಮಾಡಿದರು. ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿ, ಚೇತನ್ ಶೆಟ್ಟಿ ಪೆರ್ವಾಜೆ ವಂದನಾರ್ಪಣೆಗೈದರು.