








ಅರಸಿನಮಕ್ಕಿ: ಅರಸಿನಮಕ್ಕಿ ಗ್ರಾ.ಪಂ ಗ್ರಾಮ ಸಭೆಯು ನ.25ರಂದು ಹತ್ಯಡ್ಕ ಸಿ. ಎ. ಬ್ಯಾಂಕ್ ನ ಸಭಾ ಭವನದಲ್ಲಿ ಜರುಗಿತು.





ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ಗ್ರಾಮ ಸಭೆಯನ್ನು ನಡೆಸಿಕೊಟ್ಟರು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಕೆ.ಎನ್ ನವೀನ್ ವಹಿಸಿದ್ದರು. ಗ್ರಾ.ಪಂ ಪಿಡಿಓ ರವಿ ಬನಪ್ಪ ಗೌಡ ಅನುಪಾಲನ ವರದಿ ಮಂಡಿಸಿದರು. ಜಮಾ ಖರ್ಚಿನ ವಿವರ ಗುಮಾಸ್ತೆ ವಿಂಧ್ಯಾ ನೀಡಿದರು.

ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಶಕುಂತಲ, ಸದಸ್ಯರು, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ತಂಡ ಭಾಗಿಯಾಗಿದ್ದರು.


ಶ್ರೀ ಗೋಪಾಲಕೃಷ್ಣ ಅನುದಾನಿತ ಹಿ ಪ್ರಾ ಶಾಲೆ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮಾಡಿದರು. ಗ್ರಾ.ಪಂ ಪಿಡಿಓ ಸ್ವಾಗತಿಸಿ ಧನ್ಯವಾದ ಗೈದರು.


            





