ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ ಪ್ರಾಂತ್ಯ5 ರ ಪ್ರಾಂತ್ಯ ಸಮ್ಮೇಳನ

0

ಬೆಳ್ತಂಗಡಿ: ಅತಿಯಾದ ದುರಾಸೆಯೇ ಎಲ್ಲ ಭ್ರಷ್ಟಾಚಾರಕ್ಕೆ ಮೂಲ ಕಾರಣ. ಇರುವುದರಲ್ಲಿ ತೃಪ್ತಿಯ ಜೊತೆಗೆ ದುರಾಸೆಯ ಮಟ್ಟವಮ್ಮ ನಿಯಂತ್ರಿಸದಿದ್ದರೆ ಸಮಾಜದಲ್ಲಿ ಶಾಂತಿ‌ ಸೌಹಾರ್ದತೆ ನೆಲೆಸಲು ಸಾಧ್ಯವೇ ಇಲ್ಲ ಎಂದು ಪರಮೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ ಹೇಳಿದರು.

ಗುರುವಾಯನಕೆರೆ ಬಂಟರ ಭವನದಲ್ಲಿ ನ.27 ರಂದು ನಡೆದ, ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ ಪ್ರಾಂತ್ಯ5 ರ ಪ್ರಾಂತ್ಯ ಸಮ್ಮೇಳನ “ಪ್ರಾಪ್ತಿ” ಇದರಲ್ಲಿ ಅವರು ಶಿಖರೋಪನ್ಯಾಸ ನೀಡುತ್ತಿದ್ದರು.

ಪ್ರಾಂತ್ಯಾಧ್ಯಕ್ಷ, ಶ್ರದ್ದಾ ಎಂಟರ್ ಪ್ರೈಸಸ್ ಮಾಲಿಕ ವಸಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಲಯನ್ಸ್ ಮೂಲಕ ಸಲ್ಲಿಸಿದ ಸೇವೆಯಿಂದ ಸಂತೃಪ್ತಿಯಾಗಿದೆ. ಪ್ರಾಂತ್ಯದ ಎಲ್ಲಾ 8 ಲಯನ್ಸ್ ಕ್ಲಬ್ಬುಗಳೂ ಕೂಡ ತಪ್ತಿದಾಯಕ ಕಾರ್ಯ ಮಾಡಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಎಸ್‌ಡಿಎಂ ಶಿಕ್ಷ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್ ಸತೀಶ್ಚಂದ್ರ ಮಾತನಾಡಿ, ಯೋಜನೆ, ಮಾತು ಮತ್ತು‌ ನಮ್ಮ ಕೆಲಸ ಇವುಗಳು ಒಂದಕ್ಕೊಂದು ಪೂರಕವಾಗಿದ್ದರೆ ಅಂತವರು ಮಾಹಾತ್ಮರಾಗುತ್ತಾರೆ. ಆಡುವ ಮಾತಿಗೂ ಪ್ರವೃತ್ತಿಗೂ ಸಂಬಂಧವಿರಬೇಕಾದುದು ಮುಖ್ಯ ಎಂದರು.

ಮಾಜಿ‌ ‌ ಯೋಧ ಜಗನ್ನಾಥ ಶೆಟ್ಟಿ ರಾಷ್ಟ್ರದ್ವಜವನ್ನು ವೇದಿಕೆಗೆ ತಂದರೆ, ನಿತ್ಯಾನಂದ ನಾವರ ಅವರು ಧ್ವಜ ವಂದನೆ ನಡೆಸಿಕೊಟ್ಟರು. ಸಮ್ಮೇಳನ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ ಬೆಂಗೆತ್ಯಾರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಪ್ರಾಂತ್ಯದ ಪ್ರಥಮ ಮಹಿಳೆ ಶಾಲಿನಿ‌ ವಸಂತ ಶೆಟ್ಟಿ ನಡೆಸಿದರು. ಪ್ರಾಂತ್ಯದ ಸೇವಾ ಚಟುವಟಿಕೆಗಳ ವಿವರವನ್ನು ಅಮಿತಾನಂದ ಹೆಗ್ಡೆ, ಜಿಫ್ರಿಯನ್ ತಾವ್ರೋ ಮತ್ತು ರವಿ ಶೆಟ್ಟಿ ಸುಲ್ಕೇರಿ ನಡೆಸಿಕೊಟ್ಟರು. “ಪ್ರತೀಕಾ” ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಗಿ ಸಂಪಾದಕಿ ಸುಭಾಷಿಣಿ ಸಂಪಾದಕೀಯ ಮಾತುಗಳನ್ನಾಡಿದರು.

ಅತಿಥಿಗಳನ್ನು ಮತ್ತು ಸನ್ಮಾನಿತರನ್ನು ಪರಿಚಯಿಸುವುದು ಸಹಿತ ಇತರ ಜವಾಬ್ದಾರಿಗಳನ್ನು ಪ್ರಕಾಶ ಶೆಟ್ಟಿ ನೊಚ್ಚ, ಕೃಷ್ಣ ಆಚಾರ್, ಧರಣೇಂದ್ರ ಕೆ.ಜೈನ್, ರವೀಂದ್ರ ಶೆಟ್ಟಿ ಓಸ್ವಾಲ್ಡ್ ಡಿಸೋಜಾ, ಮಂಜುನಾಥ ಜಿ, ಲಕ್ಷ್ಮಣ ಪೂಜಾರಿ, ಕಿರಣ್ ಕುಮಾರ್ ಶೆಟ್ಟಿ, ದೇವಿಪ್ರಸಾದ್, ರಾಮಕೃಷ್ಣ ಗೌಡ, ಸುಶೀಲಾ ಎಸ್ ಹೆಗ್ಡೆ ಮೊದಲಾದವರು ನಡೆಸಿಕೊಟ್ಟರು.

ಸ್ಥಾಪಕ ಸದಸ್ಯ‌ ಎಂ.ಜಿ ಶೆಟ್ಟಿ, ಸಮಿತಿ ಕಾರ್ಯಾಧ್ಯಕ್ಷ ಹೇಮಂತ ರಾವ್, ಕೋಶಾಧಿಕಾರಿ ಸುರೇಂದ್ರ ಎಸ್, ಅ ಆತಿಥೇಯ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ದೇವಿ ಪ್ರಸಾದ್ ಬೊಳ್ಮ, ಕಾರ್ಯದರ್ಶಿ ತುಕಾರಾಮ‌ ಬಿ, ಕೋಶಾಧಿಕಾರಿ ಪಂಚಾಕ್ಷರಪ್ಪ, ಸಮ್ಮೇಳನ‌ ಸಮಿತಿ ಕಾರ್ಯದರ್ಶಿಗಳಾದ ಧತ್ತಾತ್ರೇಯ ಜಿ ಮತ್ತು ಅನಂತಕೃಷ್ಣ, ಪ್ರಾಂತ್ಯದ ಇತರ 7 ಕ್ಲಬ್ಬುಗಳಾದ ಆಲಂಗಾರು, ಬಪ್ಪನಾಡು ಇನ್ಸ್ಪಯರ್, ಗುರುಪುರ ಕೈಕಂಬ, ಮುಚ್ಚೂರು ನೀರುಡೆ, ಮೂಡಬಿದ್ರೆ, ಸುಲ್ಕೇರಿ, ವೇಣೂರು ಕ್ಲಬ್ಬುಗಳ ಅಧ್ಯಕ್ಷರುಗಳು, ಎರಡು ವಲಯಗಳ ಅಧ್ಯಕ್ಷರುಗಳು ಮತ್ತು ಪ್ರಾಂತ್ಯದ ಇತರ 11 ಮಂದಿ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಯನ್ಸ್ ಜಿಲ್ಲಾ ರಾಜ್ಯಪಾಲ ಸಂಜೀತ್‌ ಶೆಟ್ಟಿ, ದ್ವಿತೀಯ ರಾಜ್ಯಪಾಲ ಡಾ. ಮೆಲ್ವಿನ್ ಡಿಸೋಜಾ, ಮಲ್ಟಿಪಲ್ ಡಿಸ್ಟ್ರಿಕ್ಟ್ ಗವರ್ನರ್ ವಸಂತ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಅಶ್ರಫ್ ಆಲಿಕುಂಞಿ ಮತ್ತು ಶುಭಾಷಿಣಿ ಕಾರ್ಯಕ್ರಮ ನಿರ್ವಹಿಸಿದರು. ಸೀತಾಲಕ್ಷ್ಮೀ‌ ದಿನೇಶ್ ಪ್ರಾರ್ಥನೆ ಹಾಡಿದರು. ಸಮ್ಮೇಳನ‌ ಸಮಿತಿ ಪ್ರಧಾನ‌ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ ವಂದಿಸಿದರು.

 

LEAVE A REPLY

Please enter your comment!
Please enter your name here