ಯೋಗ ಸ್ಪರ್ಧೆಯಲ್ಲಿ ಹಾರ್ದಿಕಾ ಕೆರೆಕ್ಕೋಡಿ ಯವರಿಗೆ ಪ್ರಶಸ್ತಿ

0

ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಸಂಸ್ಥೆಯು ಚಿಕ್ಕಮಗಳೂರು ಜಿಲ್ಲೆಯ ಕಡೂರು ನಲ್ಲಿ ನಡೆಸಿದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 8 ರಿಂದ 10 ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಯೋಗೇನ ಚಿತ್ತಸ್ಯ ಸುಳ್ಯ ತಂಡದ ಹಾಗೂ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು. ಹಾರ್ದಿಕಾ ಕೆರೆಕ್ಕೋಡಿ ಕರ್ನಾಟಕ ರಾಜ್ಯ ಯೋಗಾಸನ ಸ್ಪೋಟ್ಸ್ ಚಾಂಪಿಯನ್ ಶೀಫ್-2022 ರಲ್ಲಿ 5 ನೇ ಸ್ಥಾನ ಹಾಗೂ 2 ನೇ ಕರ್ನಾಟಕ ರಾಜ್ಯ ಯೋಗಾಸನ ಸ್ಪೋಟ್ಸ್ ಲೀಗ್ -2022 ರಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಯೋಗ ಗುರುಗಳಾದ ಸಂತೋಷ್ ಮುಂಡಕಜೆ ಮಾರ್ಗದರ್ಶನ ನೀಡಿರುತ್ತಾರೆ . ಈಕೆ ಕೃಷ್ಣಪ್ಪ ಗೌಡ ಕೆರೆಕ್ಕೋಡಿ ಮತ್ತು ಪುಪ್ಪಾವತಿ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here