ಗಾಂಧಿನಗರ ಕೆಪಿಎಸ್‌ನಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ

0

ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢ ಶಾಲಾವಿಭಾಗದಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿಯ ಕಾರ್ಯಕ್ರಮದ ಉದ್ಘಾಟನೆ ಇಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಗರ ಪಂಚಾಯತ್ ಅಧ್ಯಕ್ಷ ವಿನಯ ಕಂದಡ್ಕ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಪಿ.ಎಸ್. ಕಾರ್ಯಧ್ಯಕ್ಷ ಪ್ರವೀಣ್ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತಾಲೂಕು ಶಿಕ್ಷಣಾಧಿಕಾರಿ ಬಿ ಓ ಮಹಾದೇವ್, ಬಿ ಆರ್ ಸಿ ಮುಖ್ಯಸ್ಥೆ ಶೀತಲ್ ಉಪ್ಪಳಿಕೆ, ಪ್ರಾಂಶುಪಾಲ ಅಬ್ದುಲ್ ಸಮದ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ನಗರ ಪಂಚಾಯತ್ ಸದಸ್ಯ ವೆಂಕಪ್ಪ ಗೌಡ, ಬಿ ಓ ಕಚೇರಿಯ ಮೇಲ್ವಿಚಾರಕರಾದ ಚಂದ್ರ ಶೇಖರ್, ನಳಿನಿ, ಉಪ ಪ್ರಾಂಶುಪಾಲ ಅರುಣ್ ಕುಮಾರ್, ಕ್ರೀಡಾಧಿಕಾರಿ ಸೂಫಿ ಪೆರಾಜೆ, ನೌಕರರ ಸಂಘದ ತೀರ್ಥರಾಮ, ಉಪ ಪ್ರಾಂಶುಪಾಲ ಅರುಣ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತಿತರರು ವೇದಿಕೆಯ ಲ್ಲಿದ್ದರು. ಉಪ ಪ್ರಾಂಶುಪಾಲ ಅರುಣ್ ಕುಮಾರ್ ಸ್ವಾಗತಿಸಿ, ಶಿಕ್ಷಕಿ ಶಹನಾಜ್ ವಂದಿಸಿದರು.

LEAVE A REPLY

Please enter your comment!
Please enter your name here