ರಾಮಕುಂಜ: ತುಳು ಕಲ್ಪಾದಿಲೆನ ಓದು-ಬರುವುದು ಕಜ್ಜಕೊಟ್ಯ

0

ರಾಮಕುಂಜ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಸಹಯೋಗದೊಂದಿಗೆ ಉಡುಪಿ ಹಾಗೂ ದ.ಕ ಜಿಲ್ಲೆಯ “ತುಳು ಕಲ್ಪಾದಿಲೆನ ಓದು-ಬರವುದ ಕಜ್ಜಕೊಟ್ಯ” ಕಾರ್ಯಕ್ರಮ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜ.೧೮ರಂದು ನಡೆಯಿತು.

 


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್‌ರವರು ಮಾತನಾಡಿ, ತುಳು ಭಾಷಾ ಶಿಕ್ಷಣ ಹಾಗೂ ತುಳು ಶಿಕ್ಷಕರು ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದು ಬಲಗೊಳ್ಳಬೇಕಾದರೆ ತುಳು ಸಾಹಿತ್ಯ ಅಕಾಡೆಮಿಯ ಒಟ್ಟಿಗೆ ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕರು ಕೈ ಜೋಡಿಸಿದಾಗ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು. ನಿವೃತ್ತ ಶಿಕ್ಷಕ ಗೋಪಾಲ್ ಶೆಟ್ಟಿ ಕಳೆಂಜರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆಗಳಲ್ಲಿ ತುಳು ಭಾಷೆ ಬೆಳವಣಿಗೆಯಾಗಬೇಕಾದರೆ ಶಿಕ್ಷಕರ ಪಾತ್ರ ಮುಖ್ಯವಾದುದು. ದ.ಕ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ತುಳು ಭಾಷಾ ಆಸಕ್ತರ ಸಂಘಟನೆಯಿಂದ ಈ ತೊಡಕುಗಳನ್ನು ಪರಿಹರಿಸಬಹುದೆಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಸೇಸಪ್ಪ ರೈಯವರು ಪ್ರಾಸ್ತಾವಿಕವಾಗಿ ಮಾತನಾಡಿ, ತುಳು ಶಿಕ್ಷಣ ಕ್ಷೇತ್ರದಲ್ಲಾಗುವ ಶಿಕ್ಷಕರ ನೋವುಗಳಿಗೆ ಹೇಗೆ ಸ್ಪಂದಿಸಬಹುದೆಂದು ಹೇಳಿದರು. ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ದಿನೇಶ್ ರೈ ಕಡಬರವರು ತುಳು ಶಿಕ್ಷಣಕ್ಕೆ ಅಕಾಡೆಮಿ ಮಾಡುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಗೋಪಾಲ್ ಶೆಟ್ಟಿ ಕಳೆಂಜರವರು ‘ಸಾಲೆಡ್ ತುಳು ಕಲಿಕೆ’ ಮತ್ತು ಉಪ್ಪುಂದ ಪ.ಪೂ.ಕಾಲೇಜಿನ ಪ್ರಾಂಶುಪಾಲ ಬಿ.ಯಾದವರವರು ‘ದುಂಬುದ ಸಾಲೆಲೆಡ್ ತುಳು ಕಲಿಕೆ ‘ ಎಂಬ ಕಾರ್ಯಾಗಾರ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ, ನಿಲಯ ವ್ಯವಸ್ಥಾಪಕ ರಮೇಶ್ ರೈ, ವಿವಿಧ ಶಾಲಾ ತುಳು ಭಾಷಾ ಶಿಕ್ಷಕರು, ಸಂಸ್ಥೆಯ ಶಿಕ್ಷಕ ಶಿಕ್ಷಕೇತರರು ಉಪಸ್ಥಿತರಿದ್ದರು. ತುಳು ಭಾಷಾ ಶಿಕ್ಷಕಿ ಸರಿತಾ ರಾಮಕುಂಜ ಕಾರ್ಯಕ್ರಮ ಸಂಯೋಜಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕಿ ಅಕ್ಷತಾ ಟಿ ವಂದಿಸಿದರು. ಶಿಕ್ಷಕಿ ಪ್ರೇಮಾ ಬಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here