ಕೊಡಿಯಾಲ ಗ್ರಾಮ ಪಂಚಾಯತ್ ಜಮಾಬಂಧಿ

0

 

ಕೊಡಿಯಾಲ ಗ್ರಾಮ ಪಂಚಾಯತ್ ನ 2021-22 ನೇ ಸಾಲಿನ ಜಮಾಬಂದಿಯು ಸೆ.13 ರಂದು ನಡೆಯಿತು.
ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರವರು ನೋಡೆಲ್ ಅಧಿಕಾರಿಯಾಗಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈ ಅಜ್ರಂಗಳ ರವರು ಅಧ್ಯಕ್ಷತೆಯನ್ನು ವಹಿಸಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿಯವರು ಸ್ವಾಗತಿಸಿದರು, ಗ್ರಾಮ ಪಂಚಾಯತ್ ಸಿಬ್ಬಂದಿ ಗುರುರಾಜ ವರದಿ ಮಂಡಿಸಿದರು.
ಕೊಡಿಯಾಲ ಗ್ರಾಮಸ್ಥರು ಲೆಕ್ಕ ಪತ್ರಗಳ ಬಗ್ಗೆ, ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು ಹಾಗೂ ಗ್ರಾಮ ಪಂಚಾಯತ್ ಸಭೆಗಳ ಬಗ್ಗೆ ಕಾಮಗಾರಿ ನಿರ್ವಹಣೆ ಬಗ್ಗೆ ಉಪೇಂದ್ರ ನಾಯಕ್ ರವರು ಚರ್ಚಿಸಿದರು. ಗ್ರಾಮ ಪಂಚಾಯತ್ ಸದಸ್ಯರುಗಳಾದ ಕರುಣಾಕರ ಆಳ್ವ, ಚಿತ್ರಾ, ವಿಜಯಕುಮಾರಿಯವರು ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಅಭಿಯಂತರರು ಜನಾರ್ಧನ ಬಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ರಾಜೇಶ್ವರಿ,ರೇವತಿ ಮತ್ತು ಹರಿಣಿ ಹಾಗೂ ವಿ.ಆರ್.ಡಬ್ಲ್ಯೂ ಧರ್ಮಪಾಲ ರವರು ಸಹಕರಿಸಿದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಹರ್ಷನ್ ಕೆ.ಟಿ ರವರು ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾರ್ವಜನಿಕ ಉಪಸ್ಥಿತಿಯಲ್ಲಿ ಕಾಮಗಾರಿ ವೀಕ್ಷಣೆ ನಡೆಯಿತು.

LEAVE A REPLY

Please enter your comment!
Please enter your name here