ಎಸ್.ಡಿ.ಪಿ.ಐ ಪಕ್ಷದಿಂದ ಗಣರಾಜ್ಯೋತ್ಸವ ಆಚರಣೆ

0

  • ಗಣರಾಜ್ಯದ ಮಹತ್ವವನ್ನು ಕಾಪಾಡುವ ಪ್ರತಿಜ್ಞೆ ಕೈಗೊಳ್ಳಬೇಕಾಗಿದೆ-ಇಬ್ರಾಹಿಂ ಸಾಗರ್

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ೭೩ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಎಸ್‌ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಮಾತನಾಡಿ ಗಣರಾಜ್ಯೋತ್ಸವ ದಿನವು ಸ್ವಾತಂತ್ರ್ಯ, ಸಮಾನತೆ, ಜಾತ್ಯಾತೀತ ಮತ್ತು ಸಮಾಜವಾದ, ಸಹೋದರತೆಯನ್ನು ಈ ದೇಶದ ವಿವಿಧತೆಯಲ್ಲಿನ ಏಕತೆಯನ್ನು ಐಕ್ಯತೆಯೊಂದೆಗೆ ಕಾನೂನು ಮೂಲಕ ಸಂಸತ್ತಿನಲ್ಲಿ ನಮಗೆ ನಾವೇ ಅಂಗೀಕರಿಸಿಕೊಂಡ ದಿನವಾಗಿದ್ದು ಈ ದಿನದ ಮಹತ್ವವನ್ನು ಯಥಾ ಸ್ಥಿತಿಯಲ್ಲಿ ಕಾಪಾಡಿಕೊಂಡು ಬರುವ ಪ್ರತಿಜ್ಞೆಯನ್ನು ಇವತ್ತು ದೇಶದ ಪ್ರತೀ ನಾಗರಿಕರು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು. ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಮಾತನಾಡಿ `ಒನ್ ನೇಶನ್ ಒನ್ ಇಂಡಿಯಾ’ ಸಂವಿಧಾನಾತ್ಮಕವಾಗಿ ಕಾರ್ಯಗತಗೊಂಡ ದಿನವೇ ಇಂದಿನ ಗಣರಾಜ್ಯ ವೆಂಬ ಏಕೀಕರಣದ ದಿನ ಎಂದರು.

ಪಕ್ಷದ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಕೆ ಎ ಮಾತನಾಡಿ ಅಂಬೇಡ್ಕರ್ ಅವರ ಸಮಬಾಳು, ಸಮಪಾಲು ಸಿದ್ದಾಂತದ ಸಂವಿಧಾನವು ದೇಶದಲ್ಲಿ ಕಾರ್ಯಗತಗೊಳ್ಳಬೇಕೆಂಬುವುದೇ ಎಸ್‌ಡಿಪಿಐ ಪಕ್ಷದ ಆಶಯವಾಗಿದೆ ಎಂದರು. ವೇದಿಕೆಯಲ್ಲಿ ಕೋಶಾಧಿಕಾರಿ ಅಶ್ರಪ್ ಬಾವು ಪಡೀಲ್, ಪಿಬಿಕೆ ಮಹಮ್ಮದ್, ಅಸೆಂಬ್ಲಿ ಸದಸ್ಯ ವಿಶ್ವನಾಥ್ ಪುಣ್ಚತ್ತಾರು ಉಪಸ್ಥಿತರಿದ್ದರು ಕುಂಬ್ರ, ಕಬಕ, ವಿಟ್ಲ ಉಪ್ಪಿನಂಗಡಿಯ ಬ್ಲಾಕ್‌ಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಜೊತೆ ಕಾರ್ಯದರ್ಶಿ ಯಹಿಯಾ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here