ಸಂಟ್ಯಾರ್ ಬದ್ರಿಯಾ ಗಲ್ಫ್ ಫ್ರೆಂಡ್ಸ್‌ಗೆ ಆಯ್ಕೆ

0

  • ಗೌರವಾಧ್ಯಕ್ಷ: ಅಶ್ರಫ್ ದಾರಿಮಿ, ಅಧ್ಯಕ್ಷ: ಶಮೀರ್, ಪ್ರ.ಕಾರ್ಯದರ್ಶಿ : ಸಾಬಿತ್ ಅಲಿ ಕಲ್ಲರ್ಪೆ

ಪುತ್ತೂರು: ಸಂಟ್ಯಾರ್ ಜಮಾತ್ ವ್ಯಾಪ್ತಿಯಲ್ಲಿ ಹಲವು ಧಾರ್ಮಿಕ ಹಾಗು ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ಸಂಟ್ಯಾರ್ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಬದ್ರಿಯಾ ಗಲ್ಫ್ ಸಮಿತಿಯ ೨೦೨೨-೨೦೨೩ ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಆಂತರಿಕ ಚುನಾವಣೆ ಮೂಲಕ ನಡೆಯಿತು.

ಅಶ್ರಫ್ ದಾರಿಮಿ

 

ಶಮೀರ್
ಸಾಬಿತ್ ಅಲಿ ಕಲ್ಲರ್ಪೆ

ಗೌರವಾಧ್ಯಕ್ಷರಾಗಿ ಸಂಟ್ಯಾರ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಶ್ರಫ್ ದಾರಿಮಿ, ಅಧ್ಯಕ್ಷರಾಗಿ ಶಮೀರ್ ಸಲಾಲ ಒಮಾನ್, ಪ್ರಧಾನ ಕಾರ್ಯದರ್ಶಿಯಾಗಿ ಸಾಬಿತ್ ಅಲಿ ಕಲ್ಲರ್ಪೆ ದಮ್ಮಾಮ್ ಹಾಗು ಉಪಾಧ್ಯಕ್ಷರಾಗಿ ನಿಶಾದ್ ಕಲ್ಲರ್ಪೆ ಜೊತೆ ಕಾರ್ಯದರ್ಶಿಯಾಗಿ ಆಶಿಕ್ ಖಜಾಂಜಿಯಾಗಿ ಶರೀಫ್ ಮರಿಕೆ ಶಾರ್ಜಾ, ಲೆಕ್ಕ ಪರಿಶೋದಕರಾಗಿ ಮೊಹಮ್ಮದ್ ಅಲಿ ಬೊಳ್ಳೆಮ್ಮರ್ , ಹಿರಿಯ ಸಲಹೆಗಾರರಾಗಿ ಇಸ್ಮಾಯಿಲ್ ನೀರ್ಕಜೆ ಹಾಗು ಅಶ್ರಫ್ ಅಲೈನ್‌ರವರುಗಳನ್ನು ಆಯ್ಕೆ ಮಾಡಲಾಯಿತು. ಊರಿನ ಪ್ರತಿನಿಧಿಗಳಾಗಿ ಸಂಶುದ್ದೀನ್ ,ಅಶ್ರಫ್ ಹಾಗು ಸದಸ್ಯರಾಗಿ ಪವಾಜ್ ಮರಿಕೆ ರಿಯಾದ್, ನಾಸಿರ್ ಬೊಳ್ಳೆಮ್ಮಾರ್ ಜುಬೈಲ್ , ಹನೀಫ್ ನೀರ್ಕಜೆ ದುಬೈ , ಮುಸ್ತಫಾ ಮರಿಕೆ ದುಬೈ , ಇರ್ಷಾದ್ ಕಲ್ಲರ್ಪೆ ದುಬೈ ಅಶ್ರಫ್ ಮರಿಕೆ ಕತಾರ್ ರವರನ್ನು ಆಯ್ಕೆ ಮಾಡಲಾಯಿತು . ನಿರ್ಗಮನ ಕಾರ್ಯದರ್ಶಿ ಶರೀಫ್ ಮರಿಕೆರವರು ಹಿಂದಿನ ಸಾಲಿನ ಕಾರ್ಯಚಟುವಟಿಕೆಯ ಲೆಕ್ಕ ವೆಚ್ಚಗಳನ್ನು ಮಂಡಿಸಿದರು. ಆಂತರಿಕ ಚುನಾವಣಾ ಪ್ರಕ್ರಿಯೆಯನ್ನು ಬಷೀರ್ ಮರಿಕೆ ಅಜ್ಮಾನ್ ಹಾಗು ಜಾಬೀರ್ ದುಬೈ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here